ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

Last Updated 13 ಅಕ್ಟೋಬರ್ 2017, 7:34 IST
ಅಕ್ಷರ ಗಾತ್ರ

ನಾಪೋಕ್ಲು: ಸರ್ಕಾರದ ಆಡಳಿತ ಮತ್ತು ಕಾರ್ಯವೈಖರಿ ವಿರೋಧಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಮ್ಮಯ್ಯ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

‘ಹಿಂದೂ ಮತ್ತು ಆರ್ಎಸ್ಎಸ್ ಜೊತೆಗೆ ಗುರುತಿಸಿಕೊಂಡಿರುವ ಕಾರ್ಯಕರ್ತರ ಕೊಲೆ ನಡೆಯುತ್ತಿದೆ. ಆದರೆ ಸರ್ಕಾರ ಅಲ್ಪ ಸಂಖ್ಯಾತರ ಪರ ವಹಿಸುತ್ತಿದೆ. ಉಳ್ಳಾಲದಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿಯೂ ಮೌನವಹಿಸಿದೆ’ ಎಂದು ಹೇಳಿದರು.

ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಜಿಲ್ಲಾ ಬಿಜೆಪಿ ಪ್ರಕೋಷ್ಠದ ಸಹ ಸಂಚಾಲಕ ಪಾಡಿಯಮ್ಮಂಡ ಮನು ಮಹೇಶ್, ನಾಪೋಕ್ಲು ಬಜರಂಗದಳದ ಅಧ್ಯಕ್ಷ ಬಿ.ಎಂ.ಪ್ರತೀಪ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೆಲೇಟಿರ ಸಾಬು ನಾಣಯ್ಯ ಅವರು ಇದ್ದರು.

ಆರ್.ಎಸ್.ಎಸ್. ಮುಖಂಡ ಕಂಗಾಂಡ ಜಾಲಿ ಪೂವಪ್ಪ, ಕಾರ್ಯಕರ್ತರಾದ ಅರೆಯಡ ರತ್ನ ಪೆಮ್ಮಯ್ಯ, ಶಿವಚಾಳಿಯಂಡ ಮಹೇಶ್, ನಿಡುಮಂಡ ಕೃತಿ, ಕುಟ್ಟಂಜಟ್ಟಿರ ಪೂಣಚ್ಚ, ಶಿವಚಾಳಿಯಂಡ ಲವ ಕಾಳಪ್ಪ, ಕುಂಡ್ಯೋಳಂಡ ಕಾಶಿ ತಮ್ಮಯ್ಯ, ಪುಲ್ಲೇರ ವಿಠಲ್ ಪಳಂಗಪ್ಪ,ಚೀಯಕಪೂವಂಡ ಗಣೇಶ್, ಕಂಗಾಂಡ ಗಣಪತಿ, ಕೆಟೋಳಿರ ಫಿರೋಜ್ ಬಾಳೆಯಡ ಶಂಭು, ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT