ಮಳೆಯ ಆರ್ಭಟ: ಮೆಜೆಸ್ಟಿಕ್‌ ಸುತ್ತ ಎರಡು–ಮೂರು ತಾಸು ಟ್ರಾಫಿಕ್‌ ಜಾಮ್, ವಾಹನ ಸವಾರರ ಪರದಾಟ

ಬುಧವಾರ, ಜೂನ್ 19, 2019
29 °C

ಮಳೆಯ ಆರ್ಭಟ: ಮೆಜೆಸ್ಟಿಕ್‌ ಸುತ್ತ ಎರಡು–ಮೂರು ತಾಸು ಟ್ರಾಫಿಕ್‌ ಜಾಮ್, ವಾಹನ ಸವಾರರ ಪರದಾಟ

Published:
Updated:
ಮಳೆಯ ಆರ್ಭಟ: ಮೆಜೆಸ್ಟಿಕ್‌ ಸುತ್ತ ಎರಡು–ಮೂರು ತಾಸು ಟ್ರಾಫಿಕ್‌ ಜಾಮ್, ವಾಹನ ಸವಾರರ ಪರದಾಟ

ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆ 6.15ರಿಂದ 40 ನಿಮಿಷ ಗುಡುಗು–ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಮಳೆಗೆ ಕೇಂದ್ರ ಬಿಂದು ಎನಿಸಿರುವ ಮೆಜೆಸ್ಟಿಕ್‌ ಸುತ್ತ ಸೇರಿದಂತೆ ಸಂಚಾರ ಅಸ್ತವ್ಯಸ್ಥವಾಗಿ, ವಾಹನಗಳು ಎರಡು–ಮೂರು ತಾಸು ನಿಂತಲ್ಲೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು.

ಓಕಳಿಪುರ ಜಂಕ್ಷನ್‌ನ ರೈಲ್ವೆ ಕೆಳ ಸೇತುವೆಯಲ್ಲಿ ನೀರು ಜಮಾವಣೆಯಾಗಿದ್ದರಿಂದ ವಾಹನಗಳು ಸಂಚರಿಸದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಈ ಜಂಕ್ಷನ್‌ಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಸಾವಿರಾರು ವಾಹನಗಳು ಹಿಂದೆ–ಮುಂದೆ ಯಾವ ಕಡೆಗೂ ಹೋಗಲು ದಾರಿ ಇಲ್ಲದೆ ನಿಂತಲ್ಲೆ ನಿಂತಿದ್ದವು.

ಓಕಳಿಪುರ ಜಂಕ್ಷನ್‌ ಹಾಗೂ ಮೆಜೆಸ್ಟಿಕ್‌ನಿಂದ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಜಂಕ್ಷನ್‌ವರೆಗೆ ವಾನಗಳು ಸಾಲುಗಟ್ಟಿದ್ದವು. ಈ ಜಂಕ್ಷನ್‌ನಲ್ಲಿ ಎಲ್ಲಾಕಡೆಯಿಂದ ವಾಹನಗಳು ಜಮಾಯಿಸಿದ್ದರಿಂದ ಎತ್ತಕಡೆಗೂ ಹೋಗಲು ದಾರಿ ಇಲ್ಲದೆ ಜಾಮ್‌ ಆಗಿತ್ತು. ಇದೇ ಸ್ಥಿತಿ ಸುಜಾತ ಜಂಕ್ಷನ್‌ನಲ್ಲೂ ಇತ್ತು. 

ಒಳ ಮಾರ್ಗದ ಕಿರುದಾರಿಗಳಲ್ಲೂ ಜಾಮ್‌

ಓಕಳಿಪುರ ಜಂಕ್ಷನ್‌ನಲ್ಲಿ ಜಾಮ್ ಆಗಿದ್ದರಿಂದ ಓಕಳಿಪುರ– ಶ್ರೀರಾಂಪುರದ ಒಳಭಾಗದ ಕಿರು ರಸ್ತೆಗಳಿಗೆ ಹೆಚ್ಚಿನ ವಾಹನಗಳು ನುಗ್ಗಿದ್ದರಿಂದ ಅಲ್ಲಿಯೂ ಜಾಮ್ ಆಗಿ ಜನರು ಅಯ್ಯೋ ರಾಮಾ... ಇದೆಂತಾ ಸ್ಥಿತಿ, ಹೇಗೆ ಹೋಗುವುದು, ಎತ್ತ ಹೋಗುವುದು ಎಂದು ದಿಕ್ಕುತೋಚದಂತಾಗಿ ನಿಂತಲ್ಲೆ ನಿಂತು, ಆಮೆ ವೇಗದಲ್ಲಿ ತುಸು ತುಸು ಮುಂದಕ್ಕೆ ತೆವಳುತ್ತಾ ಸಾಗುತ್ತಿದ್ದರು.

ಜೋರಾಗಿ ಸುರಿದು ಹೋಗಿದ್ದ ಮಳೆ 8ರ ಸುಮಾರಿಗೆ ಮತ್ತೆ ಬೀಳಲಾರಂಭಿಸಿತು. ಹೀಗಾಗಿ, ಜನರು ಮಳೆಯಲ್ಲಿಯೇ ನೆನೆಯುತ್ತಾ ಪರದಾಡುವಂತಾಯಿತು.

ಎಲ್ಲೆಲ್ಲಿ ಜಾಮ್‌
ಮೆಜೆಸ್ಟಿಕ್‌ ಸುತ್ತ, ಓಕಳಿಪುರ ರಸ್ತೆ, ಶಿವಾನಂದ ವೃತ್ತ, ರೇಸ್‌ಕೋರ್ಸ್‌ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ ಸೇರಿದಂತೆ ಹಲವು ಕಡೆ ಸಂಚಾರ ವ್ಯತ್ಯಯವಾಗಿತ್ತು.

ವಿದ್ಯುತ್‌ ವ್ಯತ್ಯಯ
ಮಳೆಯಿಂದಾಗಿ ಹಲವೆಡೆ ವಿದ್ಯುತ್‌ ವ್ಯತ್ಯಯವಾಗಿದೆ. ಬಸವೇಶ್ವರ ನಗರ, ರಾಜಾಜಿನಗರ ಸೇರಿದಂತೆ ಹಲವೆಡೆ ವಿದ್ಯುತ್‌ ವ್ಯತ್ಯಯವಾಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry