ಭಾನುವಾರ, ಸೆಪ್ಟೆಂಬರ್ 22, 2019
23 °C

ವಿಕಾಸ್‌ ಬರಲಾ ವಿರುದ್ಧ ದೋಷಾರೋಪ ಪಟ್ಟಿ

Published:
Updated:
ವಿಕಾಸ್‌ ಬರಲಾ ವಿರುದ್ಧ ದೋಷಾರೋಪ ಪಟ್ಟಿ

ಚಂಡೀಗಡ: ಯುವತಿಯನ್ನು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷ ಸುಭಾಷ್‌ ಬರಲಾ ಪುತ್ರ ವಿಕಾಸ್‌ ಬರಲಾ ಮತ್ತು ಆತನ ಸ್ನೇಹಿತ ಆಶೀಶ್‌ ಕುಮಾರ್‌ ವಿರುದ್ಧ ಇಲ್ಲಿನ ನ್ಯಾಯಾಲಯ ದೋಷಾರೋಪ ಪಟ್ಟಿ ಹೊರಿಸಿದೆ.

ಆಗಸ್ಟ್‌ 5ರಂದು ಹಿರಿಯ ಐಎಎಸ್‌ ಅಧಿಕಾರಿ ವಿರೇಂದ್ರ ಕುಂದು ಅವರ ಪುತ್ರಿ ವರ್ಣಿಕಾ ಕುಂದು ಅವರನ್ನು ಹಿಂಬಾಲಿಸಿ ಅಪಹರಿಸಲು ಯತ್ನಿಸಿದ ಆರೋಪವನ್ನು ಇಬ್ಬರ ಮೇಲೆ ಹೊರಿಸಲಾಗಿದೆ.

ವಿಕಾಸ್‌ ಮತ್ತು ಆಶೀಶ್‌ ವಿರುದ್ಧ ಐಪಿಸಿ 354 ಡಿ (ಹಿಂಬಾಲಿಸುವುದು), 341 (ಅಕ್ರಮವಾಗಿ ಕೂಡಿ ಹಾಕುವುದು),  365 ಮತ್ತು 511 (ಅಪಹರಿಸಲು ಯತ್ನ) ಅಡಿಯಲ್ಲಿ ದೋಷಾರೋಪ ದಾಖಲಿಸಲಾಗಿದೆ ಎಂದು ವಿಕಾಸ್ ಪರ ವಕೀಲ ರವೀಂದ್ರ ಪಂಡಿತ್‌ ತಿಳಿಸಿದ್ದಾರೆ.

Post Comments (+)