7

‘ಸೀಕ್ರೆಟ್ ಸೂಪರ್‌ಸ್ಟಾರ್‌’ ವೀಕ್ಷಿಸಿದ ಅಡ್ವಾಣಿ

Published:
Updated:
‘ಸೀಕ್ರೆಟ್ ಸೂಪರ್‌ಸ್ಟಾರ್‌’ ವೀಕ್ಷಿಸಿದ ಅಡ್ವಾಣಿ

ನವದೆಹಲಿ: ಟ್ರೇಲರ್‌ ಹಾಗೂ ಹಾಡುಗಳಿಂದ ಈಗಾಗಲೇ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಆಮಿರ್‌ ಖಾನ್ ನಟನೆಯ ಸೀಕ್ರೆಟ್ ಸೂಪರ್‌ ಸ್ಟಾರ್‌ ಚಿತ್ರದ ವಿಶೇಷ ಪ್ರದರ್ಶನವನ್ನು ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಎಲ್.ಕೆ.ಅಡ್ವಾಣಿ ತಮ್ಮ ಮಗಳು ಹಾಗೂ ಆಕೆಯ ಗೆಳತಿಯರೊಂದಿಗೆ ಚಿತ್ರ ವೀಕ್ಷಿಸಿದರು. ಝಾಯಿರಾ ವಾಸಿಮ್ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಅವರು ಮೆಚ್ಚುಗೆ ಸೂಚಿಸಿದರು.

ಚಿತ್ರ ವೀಕ್ಷಣೆ ನಂತರ ಅಡ್ವಾಣಿ ಅವರು ಆಮಿರ್‌ ಜತೆಗೆ ಸಿನಿಮಾ ಕುರಿತು ದೀರ್ಘ ಮಾತುಕತೆ ನಡೆಸಿ ಪ್ರಶಂಸಿಸಿದ್ದಾರೆ. 

ಅದ್ವೈತ್  ಚಂದನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಆಮಿರ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ತಮ್ಮದೇ ಬ್ಯಾನರ್‌ ಅಡಿ ನಿರ್ಮಿಸಿದ್ದಾರೆ. ಅಕ್ಟೋಬರ್ 19ರಂದು ಚಿತ್ರ ತೆರೆ ಕಾಣಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry