ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ರೆಸ್ಟೋರೆಂಟ್‌ ನವೀಕರಣಕ್ಕೆ ವಿರೋಧ

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಲಂಡನ್‌(ಎಎಫ್‌ಪಿ): ಲಂಡನ್‌ನ ಹೃದಯ ಭಾಗದಲ್ಲಿರುವ ಐತಿಹಾಸಿಕ ಭಾರತೀಯ ರೆಸ್ಟೋರೆಂಟ್‌ ಅನ್ನು ನವೀಕರಣಗೊಳಿಸುವ ಯೋಜನೆ ಈಗ ವಿವಾದಕ್ಕೆ ಕಾರಣವಾಗಿದೆ. ಇದರ ನವೀಕರಣಕ್ಕೆ ಬುದ್ಧಿ ಜೀವಿಗಳು, ಉದ್ಯಮಿಗಳು, ಆಂಗ್ಲೊ ಇಂಡಿಯನ್ನರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಇದು ಐತಿಹಾಸಿಕ ಸ್ಥಳ, ಇದರಲ್ಲಿ ನಾವು ಯಾವುದೇ ಬದಲಾವಣೆ ಮಾಡಿಲ್ಲ. ಊಟದಲ್ಲಿ ದೋಸೆ ಸೇರಿದಂತೆ ಕೆಲ ಭಕ್ಷ್ಯಗಳನ್ನು ನಿಲ್ಲಿಸಲಾಗಿದೆ’ ಎಂದು ರೆಸ್ಟೊರೆಂಟ್‌ನ ನಿರ್ದೇಶಕ ಯಾಡ್ಗರ್‌ ಮಾರ್ಕರ್‌ ತಿಳಿಸಿದ್ದಾರೆ. ಇಲ್ಲಿನ ಟೇಬಲ್‌ಗಳು ಸಹ 50 ವರ್ಷಗಳಷ್ಟು ಹಳೆಯದಾಗಿವೆ, ಇದು ಒಂದು ರೀತಿ ಮ್ಯೂಸಿಯಂನಂತಿದೆ ಎಂದು  ತಿಳಿಸಿದ್ದಾರೆ.

1950ರ ದಶಕದ ಆರಂಭದಲ್ಲಿ ಬ್ರಿಟನ್ನಿಗೆ ಭಾರತದ ಮೊದಲ ಹೈಕಮಿಷನರ್ ಆಗಿದ್ದ ಕೃಷ್ಣ ಮೆನನ್ ಅವರು ಈ ಕ್ಲಬ್ ಅನ್ನು ಸ್ಥಾಪಿಸಿದರು. ಅಂದಿನ ಭಾರತದ ಪ್ರಧಾನಿ ಜವಾಹಾರ್‌ ಲಾಲ್‌ ನೆಹರು ಅವರು ಈ ರೆಸ್ಟೋರೆಂಟ್‌ ಅನ್ನು ಉದ್ಘಾಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT