ಅಧ್ಯಕ್ಷರ ಇಲೆವನ್ ತಂಡ ಜಯಭೇರಿ

ಬುಧವಾರ, ಜೂನ್ 19, 2019
28 °C
ನ್ಯೂಜಿಲೆಂಡ್ ತಂಡಕ್ಕೆ ಸೋಲು

ಅಧ್ಯಕ್ಷರ ಇಲೆವನ್ ತಂಡ ಜಯಭೇರಿ

Published:
Updated:
ಅಧ್ಯಕ್ಷರ ಇಲೆವನ್ ತಂಡ ಜಯಭೇರಿ

ಮುಂಬೈ (ಎಎಫ್‌ಪಿ): ಗೆಲುವಿನ ನಿರೀಕ್ಷೆಯೊಂದಿಗೆ ಭಾರತದಲ್ಲಿ ಅಭಿಯಾನ ಆರಂಭಿಸಿದ ನ್ಯೂಜಿಲೆಂಡ್‌ ತಂಡ ಮಂಡಳಿ ಅಧ್ಯಕ್ಷರ ಇಲೆವನ್‌ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ನಿರಾಸೆ ಅನುಭವಿಸಿತು. ಇಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಕೆ.ಎಲ್‌.ರಾಹುಲ್‌ (68; 75 ಎ, 1 ಸಿ, 9 ಬೌಂ) ಮತ್ತು ಕರುಣ್ ನಾಯರ್ (78; 64 ಎ, 12 ಬೌಂ) ಅವರ ಅಮೋಘ ಅರ್ಧಶತಕದ ಬಲದಿಂದ ಮಂಡಳಿ ಅಧ್ಯಕ್ಷರ ಇಲೆವನ್‌ ತಂಡ 30 ರನ್‌ಗಳ ಜಯಭೇರಿ ಬಾರಿಸಿತು.

296 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪ್ರವಾಸಿ ತಂಡದವರನ್ನು ಭಾರತದ ಬೌಲರ್‌ಗಳು 265 ರನ್‌ಗಳಿಗೆ ಕೆಡವಿದರು. ಎಡಗೈ ವೇಗಿ ಜಯದೇವ ಉನದ್ಕತ್ ಮತ್ತು ಎಡಗೈ ಸ್ಪಿನ್ನರ್ ಶಹಬಾಜ್‌ ನದೀಮ್ ಪ್ರಬಲ ದಾಳಿ ನಡೆಸಿ ತಲಾ ಮೂರು ವಿಕೆಟ್ ಕಬಳಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಟಾಮ್ ಲಥಾಮ್‌ (59; 63 ಎ, 7 ಬೌಂ) ಅವರ ಅರ್ಧಶತಕ ಮತ್ತು ಒಂಬತ್ತನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 22 ಎಸೆತಗಳಲ್ಲಿ ಗಳಿಸಿದ 33 ರನ್‌ಗಳು ವ್ಯರ್ಥವಾದವು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮಂಡಳಿ ಅಧ್ಯಕ್ಷರ ಇಲೆವನ್‌ ತಂಡಕ್ಕೆ ಪೃಥ್ವಿ ಶಾ (66; 80 ಎ, 1 ಸಿ, 9 ಬೌಂ) ಮತ್ತು ರಾಹುಲ್ ಗಟ್ಟಿ ತಳಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‌ಗೆ ಇವರಿಬ್ಬರು 147 ರನ್ ಗಳಿಸಿ ಮಿಂಚಿದರು. ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲರಾಗಿ ಸೋಮವಾರವಷ್ಟೇ ಮಂಡಳಿ ಅಧ್ಯಕ್ಷರ ಇಲೆವನ್ ತಂಡಕ್ಕೆ ಕರೆಸಿಕೊಳ್ಳಲಾದ ರಾಹುಲ್‌ ಅಮೋಘ ಬ್ಯಾಟಿಂಗ್ ಮಾಡಿ ಆಯ್ಕೆ ಮಂಡಳಿಯ ಗಮನ ಸೆಳೆದರು. ಅವರು ಔಟಾದ ನಂತರ ಪೃಥ್ವಿ ಅವರ ಜೊತೆಗೂಡಿದ ಕರುಣ್ ನಾಯರ್‌ ತಂಡದ ರನ್‌ ಗಳಿಕೆಯನ್ನು ಮುಂದುವರಿಸಿದರು.

ಕರುಣ್ ನಾಯರ್‌ ಉತ್ತಮ ಲಯದಲ್ಲಿ ಬ್ಯಾಟ್‌ ಬೀಸುತ್ತ ಸಾಗಿದರು. ಕೊನೆಗೆ ಬೌಲ್ಟ್‌ಗೇ ವಿಕೆಟ್ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ ಮಂಡಳಿ ಅಧ್ಯಕ್ಷರ ಇಲೆವನ್‌: 50 ಓವರ್‌ಗಳಲ್ಲಿ 9ಕ್ಕೆ259 (ಪೃತ್ವಿ ಶಾ 66, ಕೆ.ಎಲ್‌.ರಾಹುಲ್‌ 68, ಕರುಣ್ ನಾಯರ್‌ 78; ಟ್ರೆಂಟ್ ಬೌಲ್ಟ್‌ 38ಕ್ಕೆ5, ಮಿಚೆಲ್ ಸ್ಯಾಂಟ್ನರ್‌ 40ಕ್ಕೆ2); ನ್ಯೂಜಿಲೆಂಡ್‌: 47.4 ಓವರ್‌ಗಳಲ್ಲಿ 265ಕ್ಕೆ ಆಲೌಟ್‌ (ಟಾಮ್ ಲಥಾಮ್‌ 59, ಕೇನ್‌ ವಿಲಿಯಮ್ಸನ್‌ 47; ಶಹಬಾಜ್‌ ನದೀಮ್‌ 41ಕ್ಕೆ3, ಜಯದೇವ್ ಉನದ್ಕತ್‌ 62ಕ್ಕೆ3). ಫಲಿತಾಂಶ: ಮಂಡಳಿ ಅಧ್ಯಕ್ಷರ ಇಲೆವನ್‌ ತಂಡಕ್ಕೆ 30 ರನ್‌ಗಳ ಜಯ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry