ಅಪಘಾತ: ಐದು ಮಂದಿ ಸಾವು

ಸೋಮವಾರ, ಮೇ 20, 2019
29 °C

ಅಪಘಾತ: ಐದು ಮಂದಿ ಸಾವು

Published:
Updated:
ಅಪಘಾತ: ಐದು ಮಂದಿ ಸಾವು

ರಾಮನಗರ: ರಸ್ತೆ ಪಕ್ಕದ ತಂಗುದಾಣದ ಬಳಿ ನಿಂತಿದ್ದವರಿಗೆ ಕಾರ್ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐದು ಜನ ಮೃತಪಟ್ಟಿದ್ದಾರೆ.

ಮಾಗಡಿ ತಾಲ್ಲೂಕಿನ ಸಾಹುಕಾರನ ಪಾಳ್ಯ ಬಳಿ ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ಸಂಜೆ 5.30ರ‌ ಸುಮಾರಿಗೆ ಈ ದುರ್ಘಟನೆ ಸಂಭವಿಸಿತು.

ನೆಲಮಂಗಲದಿಂದ ಹಾಸನ ಕಡೆಗೆ ಹೊರಟಿದ್ದ ಸ್ಕಾರ್ಪಿಯೊ ಚಾಲಕನ ನಿಯಂತ್ರಣ ತಪ್ಪಿ ತಂಗುದಾಣದ ಕಡೆ ನುಗ್ಗಿ ಅಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಹಾಲಿ ಬೆಂಗಳೂರಿ‌ನ ಹೆಗ್ಗನಹಳ್ಳಿಯಲ್ಲಿ ವಾಸವಿದ್ದ, ಕುಣಿಗಲ್ ತಾಲ್ಲೂಕಿನ ಜಡೇಮಾಯಸಂದ್ರ ಬಳಿಯ ಮುತ್ತುಗನಹಳ್ಳಿ  ಗ್ರಾಮದವರಾದ ಕೆಂಪರಾಜು (40) ಪತ್ನಿ ಮಮತಾ (35) ಅವರ ಮಕ್ಕಳಾದ ಸುಮಾ (10) ಹಾಗೂ ಸಂಜಯ್ (02) ಮೃತಪಟ್ಟರು.

ಕಾರಿನ ಚಾಲಕ ನವನೀತ್ (24) ಸಹ ಸಾವನ್ನಪಿದರು ಎಂದು ತಿಳಿದುಬಂದಿದೆ. ಕುದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry