ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ– ಕರಾಮತ್ತು

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿ’ ಅಂತ ನಗರಪಾಲಿಕೆಯನ್ನು ಕೇಳಿದರೆ, ‘ಮಳೆ ಬರುತ್ತಿರುವುದರಿಂದ ಗುಂಡಿ ಮುಚ್ಚಲು ಸಾಧ್ಯವಿಲ್ಲ’ ಅಂತ ಕೈಚೆಲ್ಲಿ ಕುಳಿತಿದೆ.

ಹಾಗಾದರೆ ಬೆಂಗಳೂರಿನಲ್ಲಿ ವರ್ಷಪೂರ್ತಿ ಮಳೆ ಬರುತ್ತಿರುತ್ತದೆಯೇ? ಮಳೆಯಿಂದಾಗಿಯೇ ಎಲ್ಲ ಗುಂಡಿಗಳು ಉಂಟಾದವೇ? ಪಾಲಿಕೆ ಆಡಳಿತ ವರ್ಗವು ಯಾರ ಕಿವಿಗೆ ಹೂ ಇಡುತ್ತಿದೆ? ಮಳೆಗೆ ರಸ್ತೆಯಲ್ಲಿ ಗುಂಡಿಗಳು ಉಂಟಾಗುವುದಾದರೆ, ಮಳೆ ಹನಿಗಳೇನು ಕಬ್ಬಿಣದ ಸನಿಕೆ, ಪಿಕಾಸಿಗಳೇ?

ಮಳೆ ಹನಿಗಳು ಬಿದ್ದು ಟಾರು ರಸ್ತೆಗಳಲ್ಲಿ ಹೊಂಡ ಬೀಳುವುದು ಸತ್ಯವಾದರೆ ಜೋಗದ ಜಲಪಾತ ಧುಮ್ಮಿಕ್ಕುವ ಜಾಗದಲ್ಲಿ ನೂರಾರು ಕಿಲೋಮೀಟರ್ ಆಳದ ಹೊಂಡ ಬೀಳಬೇಕಾಗಿತ್ತು! ಆದರೆ ಹಾಗಾಗಿಲ್ಲ. ಬಹುಶಃ ಹೊಂಡ ಮುಚ್ಚುವ ಕೆಲಸವನ್ನು ಗುತ್ತಿಗೆ ಹಿಡಿಯಲು ಕಾಯುತ್ತಿರುವ ಜನರ ಕರಾಮತ್ತೇ ಹೊಂಡ ಬೀಳಲು ಕಾರಣ ಇರಬೇಕು.

ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT