2.0 ಸಿನಿಮಾ: ರಜನಿಕಾಂತ್‌ ಮಾಡುತ್ತಿರುವ ಪಾತ್ರವನ್ನು ಅಮೀರ್‌ ಖಾನ್‌ ತಿರಸ್ಕರಿಸಿದ್ದು ಯಾಕೆ?

ಬುಧವಾರ, ಜೂನ್ 19, 2019
28 °C

2.0 ಸಿನಿಮಾ: ರಜನಿಕಾಂತ್‌ ಮಾಡುತ್ತಿರುವ ಪಾತ್ರವನ್ನು ಅಮೀರ್‌ ಖಾನ್‌ ತಿರಸ್ಕರಿಸಿದ್ದು ಯಾಕೆ?

Published:
Updated:
2.0 ಸಿನಿಮಾ: ರಜನಿಕಾಂತ್‌ ಮಾಡುತ್ತಿರುವ ಪಾತ್ರವನ್ನು ಅಮೀರ್‌ ಖಾನ್‌ ತಿರಸ್ಕರಿಸಿದ್ದು ಯಾಕೆ?

ಮುಂಬೈ: ಬಾಲಿವುಡ್‌ ಜನಪ್ರಿಯ ನಾಯಕ ನಟ ಅಮೀರ್‌ ಖಾನ್ 17 ವರ್ಷಗಳಲ್ಲಿ ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿರುವುದರಲ್ಲಿ ಎರಡು ಮಾತಿಲ್ಲ. ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಶ್ರೆಷ್ಠ ನಟ ಅವರು. ಆದರೆ ಬಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 2.0 ಸಿನಿಮಾದ ನಾಯಕ ಪಾತ್ರವನ್ನು (ಸೂಪರ್‌ ಸ್ಟಾರ್‌ ರಜನಿಕಾಂತ್‌ ನಿರ್ವಹಿಸುತ್ತಿರುವ ಪಾತ್ರ) ಅಮೀರ್ ಖಾನ್‌ ತಿರಸ್ಕರಿಸಿದ್ದು ಯಾಕೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಹೌದು, 2.0 ಸಿನಿಮಾದ ನಿರ್ದೇಶಕ ಶಂಕರ್‌ ಮೊದಲು ಆಫರ್‌ ಕೊಟ್ಟಿದ್ದು ಅಮೀರ್‌ ಖಾನ್ ಅವರಿಗೆ! ಆದರೆ ಅಮೀರ್ ಖಾನ್‌ ಈ ಆಫರ್ ಅನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. 

ಈ ಬಗ್ಗೆ ಅಮೀರ್‌ ಖಾನ್‌ ‘ಝೀ ಇಟಿಸಿ’ ಟಿ.ವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾನು ನಿರ್ದೇಶಕ ಶಂಕರ್‌ ಮತ್ತು ರಜನಿಕಾಂತ್‌ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಈ ಸಿನಿಮಾಗೆ ಶಂಕರ್ ಅದ್ಬುತವಾಗಿ ಚಿತ್ರಕತೆ ಬರೆದಿದ್ದಾರೆ. ‘ಈ ಪಾತ್ರವನ್ನು ನಿರ್ವಹಿಸಲು ನನ್ನಿಂದ ಸಾಧ್ಯವಿಲ್ಲ , ಅದು ರಜನಿಕಾಂತ್‌ ಅವರಿಂದ ಮಾತ್ರ ಸಾಧ್ಯ’ ಎಂದು ಶಂಕರ್‌ಗೆ ತಿಳಿಸಿದೆ ಎಂದು ಅಮೀರ್‌ ಖಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

2.0 ಸಿನಿಮಾದಲ್ಲಿ ಖಳನಟನಾಗಿ ಅಕ್ಷಯ್‌ ಕುಮಾರ್ ನಟಿಸಿದ್ದಾರೆ. 2018ರ ಜನವರಿಗೆ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಭಾರತ ಸೇರಿದಂತೆ ದಕ್ಷಿಣಾ ಏಷ್ಯಾದಲ್ಲಿ ಈ ಸಿನಿಮಾ ಬಾರೀ ನಿರೀಕ್ಷೆ ಹುಟ್ಟುಹಾಕಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry