ವಿರಾಟ್ ಪಡೆಗೆ ಬೌಲಿಂಗ್ ಮಾಡಿದ ಅರ್ಜುನ್ ತೆಂಡೂಲ್ಕರ್‌

ಸೋಮವಾರ, ಮೇ 20, 2019
33 °C

ವಿರಾಟ್ ಪಡೆಗೆ ಬೌಲಿಂಗ್ ಮಾಡಿದ ಅರ್ಜುನ್ ತೆಂಡೂಲ್ಕರ್‌

Published:
Updated:
ವಿರಾಟ್ ಪಡೆಗೆ ಬೌಲಿಂಗ್ ಮಾಡಿದ ಅರ್ಜುನ್ ತೆಂಡೂಲ್ಕರ್‌

ಮುಂಬೈ: ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್‌ ಶುಕ್ರವಾರ ವಾಂಖೆಡೆ ಕ್ರೀಡಾಂಗಣದ ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವಿರಾಟ್ ಕೊಹ್ಲಿ ಪಡೆಯ ಆಟಗಾರರಿಗೆ ಬೌಲಿಂಗ್ ಮಾಡುವ ಮೂಲಕ ಗಮನಸೆಳೆದರು.

ಭಾರತ ತಂಡದ ಮುಖ್ಯ ಕೋಚ್‌ ರವಿ ಶಾಸ್ತ್ರಿ ಹಾಗೂ ಬೌಲಿಂಗ್ ಕೋಚ್ ಭರತ್ ಅರುಣ್ ಕೂಡ ಈ ಸಂದರ್ಭದಲ್ಲಿ ಅಂಗಳದಲ್ಲಿ ಇದ್ದರು. ಅಭ್ಯಾಸದ ವೇಳೆ ಅವರು ಅರ್ಜುನ್‌ಗೆ ಬೌಲಿಂಗ್‌ ಮಾಡುವ ಕೆಲವು ತಂತ್ರ ಗಳನ್ನು ಹೇಳಿಕೊಟ್ಟರು.

ಎಡಗೈ ಮಧ್ಯಮವೇಗಿ ಅರ್ಜುನ್ ಮೊದಲು ಶಿಖರ್ ಧವನ್ ಅವರಿಗೆ ಬೌಲಿಂಗ್ ಮಾಡಿದರು. ಬಳಿಕ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಕೂಡ ಅವರ ಎಸೆತಗಳನ್ನು ಎದುರಿಸಿದರು. ಅರ್ಜುನ್ ಭಾರತದ ಆಟಗಾರರನೆಟ್ ಅಭ್ಯಾಸದಲ್ಲಿ ಬೌಲಿಂಗ್ ಮಾಡಿದ್ದು ಇದೇ ಮೊದಲು ಅಲ್ಲ. ಹಿಂದೆಯೂ ಕೆಲವು ಬಾರಿ ಬೌಲಿಂಗ್ ಮಾಡಿದ್ದರು.

ಇಂಗ್ಲೆಂಡ್ ವಿರುದ್ಧದ ಐಸಿಸಿ ವಿಶ್ವಕಪ್ ಫೈನಲ್‌ಗಾಗಿ ಅಭ್ಯಾಸ ನಡೆಸುತ್ತಿದ್ದ ಭಾರತ ಮಹಿಳೆ ಯರ ತಂಡದ ಆಟಗಾರ್ತಿಯರಿಗೂ ಅರ್ಜುನ್ ಬೌಲಿಂಗ್ ಮಾಡಿದ್ದರು. ಮುಂಬೈ 19 ವರ್ಷದೊಳಗಿನವರ ತಂಡದಲ್ಲಿ ಅರ್ಜುನ್ ಸ್ಥಾನ ಪಡೆದಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry