ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ಥ ಸಮಾಜಕ್ಕಾಗಿ ಯುವಕರು ಒಗ್ಗೂಡಿ

Last Updated 21 ಅಕ್ಟೋಬರ್ 2017, 8:32 IST
ಅಕ್ಷರ ಗಾತ್ರ

ಬೆಳ್ತಂಗಡಿ: ಸಮಾಜಕ್ಕೆ ಶಾಪದಂತೆ ಅಂಟಿಕೊಂಡಿರುವ ದುಷ್ಟ ಶಕ್ತಿಗ ಳನ್ನು ದೂರವಿಡುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಯುವಕರು ಸಂಘಟನಾತ್ಮಕವಾಗಿ ಒಗ್ಗೂಡಬೇಕಾ ಗಿದೆ ಎಂದು ಬಿಜೆಪಿ ದ.ಕ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ ಹೇಳಿದರು.

ನಾರಾವಿ ಸೂರ್ಯ ಪ್ರೆಂಡ್ಸ್ ಆಶ್ರಯದಲ್ಲಿ ದೇವಸ ಬೈಲ್‌ನಲ್ಲಿ ಆಯೋ ಜಿಸಿದ್ದ ಕೆಸರ್‍ಡೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಸರಿ ತ್ಯಾಗದ ಸಂಕೇತವಾಗಿದ್ದು, ಹಿಂದೂ ಸಮಾಜ ಅಸ್ಪಶ್ಯತೆ , ಜಾತಿ ತಾರತಮ್ಯ ಮೆಟ್ಟಿ ನಿಂತು ಕೆಸರ್‍ಡೊಂಜಿ ದಿನದ ಮೂಲಕ ಒಂದಾಗಿದೆ. ಸಮಾಜದಲ್ಲಿ ಒಡಕನ್ನು ಉಂಟುಮಾಡಿ ಲಾಭ ಪಡೆಯಲು ಹುನ್ನಾರ ನಡೆಸುವ ಶಕ್ತಿಗಳ ಬಗ್ಗೆ ಜಾಗೃತರಾಗಬೇಕೆಂದು ಸಲಹೆ ನೀಡಿದರು.

ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ತಂತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ತಾಲ್ಲೂಕು ಪಂಚಾ ಯಿತಿ ಸದಸ್ಯ ಜಯಂತ ಕೋಟ್ಯಾನ್, ವೇಣೂರು ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್ ಮೂಡುಕೋಡಿ, ಶೀನಪ್ಪ ಹೆಗ್ಡೆ, ಸುಧಾಕರ ಭಂಡಾರಿ, ಉದ್ಯಮಿಗಳಾದ ವಸಂತ ಭಟ್, ನಿರಂಜನ ಅಜ್ರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಾಕಯ್ಯ ಪೂಜಾರಿ, ಲಕ್ಷ್ಮೀ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಉದಯ ಹೆಗ್ಡೆ, ರಾಜವರ್ಮ ಜೈನ್, ಸೂರ್ಯ ಪ್ರೆಂಡ್ಸ್ ಗೌರವಾಧ್ಯಕ್ಷ ಪ್ರಸಾದ್ , ಅಧ್ಯಕ್ಷ ಸಂಚಿತ್ ಭಂಡಾರಿ, ಕಾರ್ಯದರ್ಶಿ ಮೋಹನ್, ರತ್ನಾವತಿ ಹೆಗ್ಡೆ, ಮೋಹನ್ ಅಂಡಿಂಜೆ, ಸುಜಲತಾ, ಕೃಷ್ಣಪ್ಪ ಪೂಜಾರಿ ಮಿತ್ತೊಟ್ಟು, ರಾಮ್ ಪ್ರಸಾದ್ ಮರೋಡಿ, ಭಾಸ್ಕರ ಹೆಗ್ಡೆ, ವಸಂತಿ, ಗಿರಿಜ, ಯಮುನ, ಶೇಖರ ಪೂಜಾರಿ, ನಾರಾಯಣ ಪೂಜಾರಿ, ಸದಾನಂದ ಹೆಗ್ಡೆ, ಹಾಗೂ ಸೂರ್ಯ ಫ್ರೆಂಡ್ಸ್‌ನ ಸದಸ್ಯರು ಹಾಜರಿದ್ದರು.

ಕೂಟದಲ್ಲಿ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಾಸ್ಕರ ಹೆಗ್ಡೆ ಸ್ವಾಗತಿಸಿ, ರಶ್ಮಿತಾ ಧನ್ಯವಾದ ಅರ್ಪಿ ಸಿದರು. ಸತೀಶ್ ಹಾಗೂ ಅಶೋಕ್ ಎಂ.ಕೆ. ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT