ಮರ್ಸಲ್‍ ವಿವಾದ: ಟೀಕೆಗೊಳಗಾಗಿರುವ ಸಿನಿಮಾ ದೃಶ್ಯ ವೈರಲ್

ಬುಧವಾರ, ಜೂನ್ 19, 2019
28 °C

ಮರ್ಸಲ್‍ ವಿವಾದ: ಟೀಕೆಗೊಳಗಾಗಿರುವ ಸಿನಿಮಾ ದೃಶ್ಯ ವೈರಲ್

Published:
Updated:
ಮರ್ಸಲ್‍ ವಿವಾದ: ಟೀಕೆಗೊಳಗಾಗಿರುವ ಸಿನಿಮಾ ದೃಶ್ಯ ವೈರಲ್

ಚೆನ್ನೈ: ದೀಪಾವಳಿ ದಿನ ತೆರೆಕಂಡಿರುವ ವಿಜಯ್ ನಟನೆಯ ತಮಿಳು ಚಿತ್ರ ‘ಮರ್ಸಲ್’ನಲ್ಲಿ ಕೇಂದ್ರ ಸರ್ಕಾರದ ಜಿಎಸ್‌ಟಿ ಹಾಗೂ ನೋಟು ರದ್ದತಿಗೆ ಸಂಬಂಧಿಸಿದ ದೃಶ್ಯಗಳನ್ನು ಚಿತ್ರದಿಂದ ತೆಗೆಯಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಸಿಂಗಪುರದಲ್ಲಿ ಶೇ 7 ತೆರಿಗೆ ವಿಧಿಸುತ್ತಾರೆ. ಆದರೆ ಭಾರತದಲ್ಲಿ ಶೇ 28 ಏಕೆ ಎಂದು ವಿಜಯ್ ಪ್ರಶ್ನಿಸುತ್ತಾರೆ. ಮದ್ಯವನ್ನು ಜಿಎಸ್‌ಟಿ ಅಡಿ ಏಕೆ ತಂದಿಲ್ಲ ಎಂದು ಜಿಎಸ್‍ಟಿ ಬಗ್ಗೆ ಸಿನಿಮಾದಲ್ಲಿ ಪ್ರಶ್ನಿಸಲಾಗಿದ್ದು ಈ ದೃಶ್ಯಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತ ಪಡಿಸಿತ್ತು. ಆದರೆ ಜಿಎಸ್‍ಟಿ ಬಗ್ಗೆ ಪ್ರಶ್ನಿಸುವ ಆ ದೃಶ್ಯವೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಪ್ರಸ್ತುತ ಸಿನಿಮಾದಲ್ಲಿ ನಾಯಕ ವಿಜಯ್ ಅವರು ಔಷಧಿಗೆ ಶೇ. 12ರಷ್ಟು ಜಿಎಸ್‍ಟಿ ವಿಧಿಸಲಾಗಿದೆ ಆದರೆ ಹಲವಾರು ಜನರ ಸಾವಿಗೆ ಕಾರಣವಾಗುವ ಮದ್ಯದ ಮೇಲೆ ಜಿಎಸ್‍ಟಿ ಇಲ್ಲ. ಶೇ. 7 ರಷ್ಟು ಜಿಎಸ್‍ಟಿ ಇರುವ ಸಿಂಗಪುರದಲ್ಲಿ ಔಷಧಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳುವ ದೃಶ್ಯವಿದೆ. ಅಷ್ಟೇ ಅಲ್ಲದೆ ಗೋರಖಪುರದಲ್ಲಿ ಆಮ್ಲಜನಕದ ಕೊರತೆಯಿಂದ ಮಕ್ಕಳು ಸಾವನ್ನಪ್ಪಿದ ಘಟನೆಗೂ ಈ ದೃಶ್ಯದಲ್ಲಿ ಸಂಬಂಧ ಕಲ್ಪಿಸಲಾಗಿದೆ. ಈ ಎಲ್ಲ ದೃಶ್ಯಗಳಿಗೆ ಕತ್ತರಿ ಹಾಕಬೇಕು ಇಲ್ಲವೇ ಮ್ಯೂಟ್ ಮಾಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.

ಬಿಜೆಪಿಯ ಈ ವಾದಕ್ಕೆ ಪ್ರತಿಕ್ರಿಯಿಸಿದ ಮರ್ಸಲ್ ಸಿನಿಮಾದ ಸಂಕಲನಕಾರ ರೂಬೆನ್ ಅವರು ಬಿಜೆಪಿಗೆ ಸಿನಿಮಾವನ್ನು ಎಡಿಟ್ ಮಾಡುವ ಹಕ್ಕು ಇಲ್ಲ, ನಾನೇ ಆ ಸಿನಿಮಾದ ಸಂಕಲನಕಾರ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿವಾದ ಕಾವೇರುತ್ತಿದ್ದಂತೆ ನಟ ಕಮಲ್ ಹಾಸನ್ ಕೂಡಾ ಮರ್ಸಲ್ ಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಮರ್ಸಲ್ ಗೆ ಪ್ರಮಾಣ ಪತ್ರ ಸಿಕ್ಕಿದೆ. ಅದನ್ನು ಮತ್ತೊಮ್ಮೆ ಸೆನ್ಸಾರ್ ಮಾಡುವ ಅಗತ್ಯವಿಲ್ಲ. ಟೀಕೆಗಳನ್ನು ತರ್ಕಬದ್ಧವಾಗಿ  ಎದುರಿಸಿ, ಟೀಕೆಗಳ ಸದ್ದಡಗಿಸುವುದು ಬೇಡ ಎಂದು ಕಮಲ್ ಹೇಳಿದ್ದಾರೆ. 

ಸಾಮಾಜಿಕ ತಾಣಗಳಲ್ಲಿ #MersalVsModi ಎಂಬ ಹ್ಯಾಶ್‍ಟ್ಯಾಗ್‍ನೊಂದಿಗೆ ನೆಟಿಜನ್‍ಗಳು ಮೆರ್ಸೆಲ್‍ಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡುತ್ತಿದ್ದಾರೆ. ಸಿನಿಮಾದ ಬಗ್ಗೆ ಬಿಜೆಪಿ ತಕರಾರು ಎತ್ತಿರುವುದರಿಂದ ಪರೋಕ್ಷವಾಗಿ ಸಿನಿಮಾಗೆ ಹೆಚ್ಚಿನ ಪ್ರಚಾರವೂ ಸಿಕ್ಕಿದಂತಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry