7

ಮೋದಿ ನಮ್ಮೊಂದಿಗಿದ್ದಾರೆ: ಎಐಎಡಿಎಂಕೆ ಸಚಿವ

Published:
Updated:

ಆಂಡಿಪಟ್ಟಿ, ತಮಿಳುನಾಡು: ‘ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮೊಂದಿದ್ದಾರೆ. ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಯಾರೂ ನಮ್ಮನ್ನು ಅಲುಗಿಸಲಾಗದು. ಪಕ್ಷವನ್ನು ಯಾರಿಂದಲೂ ನಾಶಪಡಿಸಲು ಆಗುವುದಿಲ್ಲ’ ಎಂದು ಸಚಿವ ಕೆ.ಟಿ. ರಾಜೇಂದ್ರ ಬಾಲಾಜಿ ಹೇಳಿದ್ದಾರೆ.

ಶುಕ್ರವಾರ ರಾತ್ರಿ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು. ‘ಡಿಎಂಕೆ ಸೇರಿದಂತೆ ಯಾರೂ ಎಐಎಡಿಎಂಕೆಯನ್ನು ವಿರೋಧಿಸಲು ಸಾಧ್ಯವಿಲ್ಲ’ ಎಂದೂ ಹೇಳಿದ್ದಾರೆ.

ಶಶಿಕಲಾ ಹಾಗೂ ಪಳನಿಸ್ವಾಮಿ ಅವರು ಪಕ್ಷದ ಚಿಹ್ನೆ ತಮಗೆ ಸೇರಬೇಕು ಎಂದು ಬೇಡಿಕೆಯಿಟ್ಟ ಕಾರಣ ಮಾರ್ಚ್ 23ರಂದು ಚುನಾವಣಾ ಆಯೋಗವು ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಅಮಾನತಿನಲ್ಲಿಟ್ಟಿದೆ. ಆಗಸ್ಟ್ 21ರಂದು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಶಶಿಕಲಾ ವಿರುದ್ಧ ಬಂಡಾಯ ಸಾರಿದ್ದರು. ಏಳು ತಿಂಗಳ ಭಿನ್ನಮತ ಕೊನೆಯಾಗಿ ಪಳನಿಸ್ವಾಮಿ ಬಣ ಹಾಗೂ ಪನ್ನೀರಸೆಲ್ವಂ ಬಣ ಒಂದಾಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry