ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಿದ ಸೇತುವೆ, ಹೊಲಕ್ಕೆ ನುಗ್ಗಿದ ನೀರು

Last Updated 22 ಅಕ್ಟೋಬರ್ 2017, 4:37 IST
ಅಕ್ಷರ ಗಾತ್ರ

ಜನವಾಡ: ಕಾರಂಜಾ ನದಿ ತುಂಬಿ ಹರಿಯುತ್ತಿರುವ ಕಾರಣ ಬೀದರ್ ತಾಲ್ಲೂಕಿನ ಬಗದಲ್ ಬಳಿಯ ಹಳೆಯ ಸೇತುವೆ ನೀರಿನಲ್ಲಿ ಮುಳುಗಿದ್ದು, ನದಿ ದಂಡೆಯಲ್ಲಿ ಇರುವ ಗ್ರಾಮಗಳ ರೈತರ ಹೊಲಗಳಿಗೆ ನೀರು ನುಗ್ಗಿದೆ.

ತೆಲಂಗಾಣ ಪ್ರದೇಶದಲ್ಲಿ ವಾರದಿಂದ ಮಳೆಯಾಗುತ್ತಿರುವುದರಿಂದ ಬಗದಲ್ ಹತ್ತಿರದ ಸೇತುವೆಯಿಂದ ಮರಕುಂದಾ ಕಡೆಗಿನ ನದಿ ಭಾಗದಲ್ಲಿ ನೀರು ತುಂಬಿದೆ.

‘ಬಗದಲ್, ಬಾಪುರ, ಮೊಗದಾಳ, ರೇಕುಳಗಿ, ರಂಜೋಳಖೇಣಿ, ಹುಚಕನಳ್ಳಿ ಪ್ರದೇಶಗಳ ರೈತರ ಹೊಲಗಳಿಗೆ ಕಾರಂಜಾ ಅಣೆಕಟ್ಟೆಯ ಹಿನ್ನೀರು ನುಗ್ಗಿದೆ’ ಎಂದು ಅಖಿಲ ಭಾರತ ಕಿಸಾನ್ ಸಭಾದ ಮುಖಂಡ ಬಾಬುರಾವ್ ಹೊನ್ನಾ ತಿಳಿಸಿದ್ದಾರೆ.

‘ಅನೇಕ ರೈತರ ಹೊಲಗಳಲ್ಲಿ ನೀರು ನಿಂತುಕೊಂಡ ಕಾರಣ ಹಿಂಗಾರು ಬಿತ್ತನೆಯೇ ಆಗಿಲ್ಲ. ರೈತರಿಗೆ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT