ನ್ಯೂಜಿಲೆಂಡ್‌ ವಿರುದ್ಧ ಟಿ–20 ಸರಣಿಗೆ ಟೀಂ ಇಂಡಿಯಾ ಪ್ರಕಟ; ರಾಹುಲ್‌, ಮನೀಷ್‌ಗೆ ಸ್ಥಾನ

ಭಾನುವಾರ, ಜೂನ್ 16, 2019
22 °C

ನ್ಯೂಜಿಲೆಂಡ್‌ ವಿರುದ್ಧ ಟಿ–20 ಸರಣಿಗೆ ಟೀಂ ಇಂಡಿಯಾ ಪ್ರಕಟ; ರಾಹುಲ್‌, ಮನೀಷ್‌ಗೆ ಸ್ಥಾನ

Published:
Updated:
ನ್ಯೂಜಿಲೆಂಡ್‌ ವಿರುದ್ಧ ಟಿ–20 ಸರಣಿಗೆ ಟೀಂ ಇಂಡಿಯಾ ಪ್ರಕಟ; ರಾಹುಲ್‌, ಮನೀಷ್‌ಗೆ ಸ್ಥಾನ

ಮುಂಬೈ: ನ್ಯೂಜಿಲೆಂಡ್‌ ವಿರುದ್ಧ ನ.1ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ–20 ಸರಣಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) 16 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ.

ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಕನ್ನಡಿಗ ಕೆ.ಎಲ್‌. ರಾಹುಲ್‌, ಟಿ–20 ಸರಣಿಗೆ ಆಯ್ಕೆಯಾಗಿರುವುದು ವಿಶೇಷ.

ಪ್ರಕಟಿತ ತಂಡ: ವಿರಾಟ್‌ ಕೊಹ್ಲಿ(ನಾಯಕ), ರೋಹಿತ್‌ ಶರ್ಮಾ(ಉಪ ನಾಯಕ), ಶಿಖರ್‌ ಧವನ್‌,  ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ, ಶ್ರೇಯಸ್‌ ಐಯರ್‌, ದಿನೇಶ್‌ ಕಾರ್ತಿಕ್‌, ಎಂ.ಎಸ್‌.ದೋನಿ, ಹಾರ್ದಿಕ್‌ ಪಾಂಡೆ, ಅಕ್ಷರ್‌ ಪಟೇಲ್‌, ಯಜುವೇಂದ್ರ ಜಾಹಲ್‌, ಕುಲದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬೂಮ್ರಾ, ಅಶಿಶ್‌ ನೆಹ್ರಾ, ಮೊಹಮ್ಮದ್‌ ಸಿರಾಜ್‌.

ಶ್ರೀಲಂಕಾ ತಂಡದ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಆಯ್ಕೆ

ಜತಗೆ, ಭಾರತಕ್ಕೆ ಬರಲಿರುವ ಶ್ರೀಲಂಕಾ ತಂಡದ ವಿರುದ್ಧ ನಡೆಯುವ ಅಭ್ಯಾಸ ಪಂದ್ಯಕ್ಕೆ ನಮನ್‌ ಓಜಾ ನೇತೃತ್ವದ 13 ಸದಸ್ಯರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

ಪ್ರಕಟಗೊಂಡ ತಂಡ: ನಮನ್ ಓಜಾ (ನಾಯಕ, ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಜೀವನ್ ಜೋತ್ ಸಿಂಗ್, ಬಿ. ಸಂದೀಪ್, ತನ್ಮಯ್ ಅಗರ್ವಾಲ್, ಅಭಿಷೇಕ್ ಗುಪ್ತಾ, ರೋಹನ್ ಪ್ರೇಮ್, ಆಕಾಶ್ ಬಂಡಾರಿ, ಜಲಜ್ ಸಕ್ಸೇನಾ, ಸಿ.ವಿ. ಮಿಲಿಂದ್,  ಅವೇಶ್ ಖಾನ್, ಸಂದೀಪ್ ವಾರಿಯರ್, ರವಿ ಕಿರಣ್ ಆಯ್ಕೆಯಾಗಿದ್ದಾರೆ.

ಎರಡು ಟೆಸ್ಟ್ ಪಂದ್ಯಗಳಿಗೆ ಪ್ರಕಟಗೊಂಡ ತಂಡ
ನ. 16ರಂದು ಶ್ರೀಲಂಕಾ ವಿರುದ್ಧ ಆರಂಭವಾಗಲಿರುವ ಟೆಸ್ಟ್‌ ಸರಣಿಗೆ ವಿರಾಟ್‌ ಕೊಹ್ಲಿ ನೇತೃತ್ವದ 16 ಸದಸ್ಯರ ತಂಡವನ್ನು ಸಹ ಪ್ರಕಟಿಸಿದೆ. 

ಪ್ರಕಟಿತ ತಂಡ: ವಿರಾಟ್‌ ಕೊಹ್ಲಿ(ನಾಯಕ), ರಹಾನೆ(ಉಪ ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮಾ, ಕೆ.ಎಲ್‌. ರಾಹುಲ್‌, ಮುರಳಿ ವಿಜಯ್‌, ಚೇತೇಶ್ವರ್‌ ಪೂಜಾರ, ವೃದ್ಧಿಮಾನ್‌ ಸಹಾ(ವಿಕೆಟ್‌ ಕೀಪರ್‌), ರವೀಂದ್ರ ಜಡೇಜ, ಆರ್‌. ಅಶ್ವಿನ್‌, ಕುಲದೀಪ್‌ ಯಾದವ್‌, ಹಾರ್ದಿಕ್‌ ಪಾಂಡೆ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಇಶಾಂತ್‌ ಶರ್ಮಾ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry