ಶನಿವಾರ, ಸೆಪ್ಟೆಂಬರ್ 21, 2019
21 °C

ಐಎಸ್ ವಿರುದ್ಧದ ಕಾರ್ಯಾಚರಣೆ ಯಶಸ್ವಿ

Published:
Updated:

ಕ್ಲಾರ್ಕ್ (ಫಿಲಿಪ್ಪಿನ್ಸ್): ಫಿಲಿಪ್ಪೀನ್ಸ್‌ನ ದಕ್ಷಿಣ ಭಾಗದಲ್ಲಿ ಇಸ್ಲಾಮಿಕ್ ಸ್ಟೇಟ್ ಬೆಂಬಲಿಗರ ವಿರುದ್ಧ ಕಳೆದ ಐದು ತಿಂಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆ ಕೊನೆಗೂ ಸೋಮವಾರ ಯಶಸ್ವಿಯಾಗಿ ಮುಕ್ತಾಯವಾಗಿದೆ.

‘ಮಾರಾವಿಯಲ್ಲಿ ಇನ್ನು ಯಾವುದೇ ಉಗ್ರರು ಇಲ್ಲ. ಐಎಸ್‌ ಉಗ್ರರು ಇಲ್ಲಿ ನೆಲೆ ಸ್ಥಾಪಿಸಿಕೊಳ್ಳಬಹುದು ಎನ್ನುವ ಭೀತಿ ಇದರಿಂದಾಗಿ ಕೊನೆಗೊಂಡಿದೆ’ ಎಂದು ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಂಜಾನಾ ಅವರು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ 920ಕ್ಕೂ ಹೆಚ್ಚು ಐಎಸ್ ಉಗ್ರರು, 165 ಯೋಧರು ಹಾಗೂ 47 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸೇನಾಪಡೆ ತಿಳಿಸಿದೆ.

Post Comments (+)