ನಮನ್ ಓಜಾಗೆ ಸಾರಥ್ಯ

ಸೋಮವಾರ, ಜೂನ್ 17, 2019
22 °C
ಅಭ್ಯಾಸ ಪಂದ್ಯಕ್ಕೆ ಮಂಡಳಿ ಅಧ್ಯಕ್ಷರ ಇಲೆವನ್‌ ತಂಡ ಪ್ರಕಟ

ನಮನ್ ಓಜಾಗೆ ಸಾರಥ್ಯ

Published:
Updated:
ನಮನ್ ಓಜಾಗೆ ಸಾರಥ್ಯ

ಮುಂಬೈ: ಮಧ್ಯಪ್ರದೇಶದ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ನಮನ್ ಓಜಾ ಶ್ರೀಲಂಕಾ ವಿರುದ್ಧದ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡಲಿರುವ ಮಂಡಳಿ ಅಧ್ಯಕ್ಷರ ಇಲೆವನ್ ತಂಡಕ್ಕೆ ಸಾರಥ್ಯ ವಹಿಸಲಿದ್ದಾರೆ.

ಕೋಲ್ಕತ್ತದಲ್ಲಿ ನವೆಂಬರ್‌ 11ರಿಂದ ಪಂದ್ಯ ನಡೆಯಲಿದೆ. ಹೈದರಾಬಾದ್, ಕೇರಳ, ಮಧ್ಯಪ್ರದೇಶ ಹಾಗೂ ಪಂಜಾಬ್‌ ರಾಜ್ಯಗಳ 13 ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

‘ರಣಜಿ ಟ್ರೋಫಿಯಲ್ಲಿ ಆಟಗಾರರು ರಾಜ್ಯಕ್ಕಾಗಿ ಆಡುತ್ತಿದ್ದಾರೆ. ಆದ್ದರಿಂದ ಯುವ ಆಟಗಾರರಿಗೆ ತಂಡದಲ್ಲಿ ಹೆಚ್ಚು ಮನ್ನಣೆ ನೀಡಲಾಗಿದೆ’ ಎಂದು ಭಾರತ ‘ಎ’ ಹಾಗೂ 19 ವರ್ಷದೊಳಗಿನವರ ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ತಂಡ ಇಂತಿದೆ: ನಮನ್ ಓಜಾ (ನಾಯಕ, ವಿಕೆಟ್ ಕೀಪರ್‌), ಸಂಜು ಸ್ಯಾಮ್ಸನ್‌, ಜಿಲ್ವಂಜ್ಯೋತ್ ಸಿಂಗ್‌, ಬಿ. ಸಂದೀಪ್‌, ತನ್ಮಯ್‌ ಅಗರವಾಲ್‌, ಅಭಿಷೇಕ್‌ ಗುಪ್ತಾ, ರೋಹನ್ ಪ್ರೇಮ್‌, ಅಕಾಶ್‌ ಭಂಡಾರಿ, ಜಲಜ್‌ ಸಕ್ಸೇನಾ, ಚಾಮ ಮಿಲಿಂದ್, ಅವೇಶ್ ಖಾನ್‌, ಸಂದೀಪ್‌ ವಾರಿಯರ್‌, ರವಿ ಕಿರಣ್‌.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry