ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮ ಭಾವಚಿತ್ರದ ಅದ್ಧೂರಿ ಮೆರವಣಿಗೆ 

Last Updated 24 ಅಕ್ಟೋಬರ್ 2017, 9:45 IST
ಅಕ್ಷರ ಗಾತ್ರ

ಹುಣಸಗಿ: ಸೋಮವಾರ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಸಡಗರ, ಸಂಭ್ರಮದೊಂದಿಗೆ ಆಚರಿಸಲಾಯಿತು. ಚನ್ನಮ್ಮನ ಬೃಹತ್ ಭಾವಚಿತ್ರವನ್ನು ವಾಹನದಲ್ಲಿ ಇರಿಸಿ, ಬಾಜಾ ಭಜಂತ್ರಿ ಹಾಗೂ ವಿವಿಧ ಕಲಾ ತಂಡಗಳಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಬಸವೇಶ್ವರ ವೃತ್ತದಿಂದ ಮುಖ್ಯರಸ್ತೆ,  ಒಳ ಅಗಸಿಯ ಗ್ರಾಮದೇವತೆಯ ಕಟ್ಟೆಯವರೆಗೂ ಮೆರವಣಿಗೆ ವೈಭವದಿಂದ ನಡೆಯಿತು. ಹಲಗೆಯ ನಾದ, ಕುದುರೆ ಕುಣಿತ, ಚನ್ನಮ್ಮನ ವೇಷಧಾರಿ ಚಿಣ್ಣರು, ಬಳ್ಳಾರಿಯ ಕಲಾತಂಡದ ಡೊಳ್ಳು ಕುಣಿತ ಜನಮನ ಸೂರೆಗೊಂಡಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಪಟ್ಟಣದ ಹಿರಿಯ ಮುಖಂಡರಾದ ನಾಗಣ್ಣ ದಂಡಿನ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮೋಹನ ಪಾಟೀಲ, ಡಾ.ಬಿ.ಬಿ.ಬಿರಾದಾರ, ಎಪಿಎಂಸಿ ಸದಸ್ಯ ದೇವಣ್ಣ ಮಲಗಲದಿನ್ನಿ, ಎನ್‌.ಎಂ.ಬಳಿ, ಸಿದ್ದಣ್ಣ ಮಲಗಲದಿನ್ನಿ, ತಿಪ್ಪಣ್ಣ ಚಂದಾ, ಈರಪ್ಪ ದೇಸಾಯಿ, ಬಸಣ್ಣ ದೇಸಾಯಿ, ವೀರೇಶ ಚಿಂಚೋಳಿ, ಭೀಮನಗೌಡ ದೇಸಾಯಿ, ಶರಣು ದಂಡಿನ್, ಚನ್ನಯ್ಯಸ್ವಾಮಿ ಹಿರೇಮಠ, ಹೊನ್ನಪ್ಪ ದೇಸಾಯಿ, ಆರ್.ಎಂ.ರೇವಡಿ, ಹೊನ್ನಕೇಶವ ದೇಸಾಯಿ, ಈಶ್ವರಪ್ಪ ಶ್ರೀಗಿರಿ, ಸಂಗನಗೌಡ ಪೊಲೀಸ್ ಪಾಟೀಲ, ಅಮರೇಶ ಬಸನಗೌಡ್ರ,  ಶಿವಲಿಂಗಪ್ಪ ಭಜನಿ, ಪ್ರಭುಗೌಡ ಮಾಳನೂರ,  ಬಸವರಾಜ ಕೋಳಕೂರ, ಶಾಂತಗೌಡ ಕವಿತಾಳ ಇದ್ದರು.

ಗ್ರಾ.ಪಂ: ಹುಣಸಗಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡ ಮೇಲಪ್ಪ ಗುಳಗಿ ಮಾತನಾಡಿ, ‘ರಾಣಿ ಚೆನ್ನಮ್ಮ ಅಪ್ಪಟ ದೇಶಪ್ರೇಮಿ. ಯುವಕರಿಗೆ ಅವರ ಚರಿತ್ರೆ ಸಂಪೂರ್ಣವಾಗಿ ತಿಳಿದರೆ ದೇಶಪ್ರೇಮ ತಾನಾಗಿಯೇ ಹೊರಹೊಮ್ಮುತ್ತದೆ’ ಎಂದರು.

ಅಭಿವೃದ್ಧಿ ಅಧಿಕಾರಿ ರಾಜಶೇಖರನಾಯಕ, ಮುಖಂಡರಾದ ಬಸಣ್ಣ ದೊರೆ, ಗುರಲಿಂಗಪ್ಪ ಸಜ್ಜನ, ಅನಂತ ದೇಶಪಾಂಡೆ, ಶಿವಶರಣ ದೇಸಾಯಿ, ಶಿವನಗೌಡ ಪೊಲೀಸ್‌ಪಾಟೀಲ, ಈರಣ್ಣ ಬಡಿಗೇರ, ಆನಂದ ಬಾರಿಗಿಡದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT