ಬಳಸಿ ನಂತರ ಇನ್‌ಸ್ಟಾಲ್‌ ಮಾಡಿಕೊಳ್ಳಿ

ಶುಕ್ರವಾರ, ಮೇ 24, 2019
25 °C

ಬಳಸಿ ನಂತರ ಇನ್‌ಸ್ಟಾಲ್‌ ಮಾಡಿಕೊಳ್ಳಿ

Published:
Updated:
ಬಳಸಿ ನಂತರ ಇನ್‌ಸ್ಟಾಲ್‌ ಮಾಡಿಕೊಳ್ಳಿ

ಹೊಸದೊಂದು ಆ್ಯಪ್ ಬಳಸಬೇಕು ಎಂದರೆ ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಕೆಲವು ಸಲ ಫೋನ್‌ಗಳಲ್ಲಿ ಮೆಮೊರಿಯೇ ಇರುವುದಿಲ್ಲ. ಅಂಥ ಸಂದರ್ಭ ಬಳಕೆದಾರರು ಪರದಾಡಬೇಕಾಗುತ್ತದೆ.

ಈ ಸಮಸ್ಯೆಗೆ ಈಗ ಗೂಗಲ್‌ ಪ್ಲೇ ಸ್ಟೋರ್‌ ‘ಟ್ರೈ ಇಟ್ ನೌ’ ಮೂಲಕ ಪರಿಹಾರ ಸೂಚಿಸಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೊಸ ಆ್ಯಪ್ ಇನ್‌ಸ್ಟಾಲ್ ಮಾಡಲು ಹೋಗುವ ಸಂದರ್ಭದಲ್ಲಿ ‘ಟ್ರೈ ಇಟ್ ನೌ’ ಎಂಬ ಆಯ್ಕೆ ಕಾಣಿಸುತ್ತದೆ. ಇದನ್ನು ಆಯ್ಕೆ ಮಾಡಿಕೊಂಡರೆ ಒಂದು ದಿನ ಅಥವಾ ಒಂದು ಬಾರಿ ಆ್ಯಪ್ ಬಳಸಬಹುದು.

‘ಟ್ರೈ ಇಟ್ ನೌ’ ಆಯ್ಕೆಯಲ್ಲಿ ಸಧ್ಯ ಕೆಲವೇ ಆ್ಯಪ್‌ಗಳು ಸಿಗುತ್ತಿವೆ. ಈ ಆಯ್ಕೆಯಲ್ಲಿ ಇರುವ ನ್ಯೂನತೆ, ಸುರಕ್ಷತೆಯ ವಿಚಾರವನ್ನು ಗಮನಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸುತ್ತೇವೆ' ಎಂದು ಗೂಗಲ್‌ ಹೇಳಿಕೊಂಡಿದೆ.

ನಿಮ್ಮ ಸ್ಮಾರ್ಟ್‌ ಫೋನ್‌ನಲ್ಲಿ 'ಟ್ರೈ ಇಟ್‌ ನೌ' ಆಯ್ಕೆ ಕಾಣಿಸುತ್ತಿಲ್ಲವೇ? ಒಮ್ಮೆ ಗೂಗಲ್ ಪ್ಲೇ ಸ್ಟೋರ್‌ ಆಪ್‌ಡೇಟ್ ಮಾಡಿಕೊಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry