ಗುರುವಾರ , ಸೆಪ್ಟೆಂಬರ್ 19, 2019
21 °C

ಬುಧವಾರ, 25–10-1967

Published:
Updated:

ಮಂಗಳೂರು ಬಂದರು ಅಭಿವೃದ್ಧಿ ಪ್ರಥಮ ಘಟ್ಟಕ್ಕೆ ಶೀಘ್ರವೇ ಕೇಂದ್ರದ ಸಮ್ಮತಿ

ಬೆಂಗಳೂರು, ಅ. 24– ಮಂಗಳೂರು ಬಂದರು ಅಭಿವೃದ್ಧಿ ಯೋಜನೆಯ ಪ್ರಥಮ ಘಟ್ಟದ ಯೋಜನೆಗೆ ಕೇಂದ್ರ ಸರಕಾರದ ಅನುಮತಿಯನ್ನು ಮುಂದಿನ ಪಾರ್ಲಿಮೆಂಟ್‌ ಅಧಿವೇಶನದಲ್ಲಿ ಪ್ರಕಟಿಸುವುದಾಗಿ ಕೇಂದ್ರದ ಸಾರಿಗೆ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರು ಇಂದು ಇಲ್ಲಿ ಭರವಸೆ ನೀಡಿದರು.

ಪ್ರಥಮ ಘಟ್ಟದ ಯೋಜನೆಗೆ ಮಂಜೂರಾತಿ ನೀಡಲು ಕೇಂದ್ರ ಅರ್ಥ ಖಾತೆಗೆ ‘ಈಗ ಯಾವ ಕಷ್ಟವೂ ಇಲ್ಲ’ ಎಂದರು.

ಪಾರ್ಲಿಮೆಂಟ್ ಅಧಿವೇಶನ ನವೆಂಬರ್ 13 ರಂದು ಆರಂಭವಾಗಿ ಡಿಸೆಂಬರ್ 22ರ ವರೆಗೆ ನಡೆಯುತ್ತದೆ.

‘ಮಂಗಳೂರು ಬಂದರು ನಿರ್ಮಾಣ ಯೋಜನೆ ಬಗ್ಗೆ ಪುನರಾಲೋಚನೆ ಇಲ್ಲ. ಈ ಯೋಜನೆಯನ್ನು ಕಾರ್ಯಗತ ಮಾಡುವುದು ಖಂಡಿತ’ ಎಂದು ಮತ್ತೊಮ್ಮೆ ಆಶ್ವಾಸನೆ ನೀಡಿದರು.

ಸಾಲ ನೀಡಿಕೆಯಲ್ಲಿ ಕೃಷಿಗೇ ಅಲಕ್ಷ್ಯ: ಯೋಜನೆ ಯಶಸ್ಸಿಗೆ ಬ್ಯಾಂಕ್ ರಾಷ್ಟ್ರೀಕರಣ ಅಗತ್ಯ

ನವದೆಹಲಿ, ಅ. 24– ಯೋಜನೆ ಗುರಿಗಳು ಸಾಧಿಸಲ್ಪಡಬೇಕಾದರೆ ಬ್ಯಾಂಕ್‌ಗಳನ್ನು ಖಾಸಗಿ ಉದ್ಯಮ ರಂಗದಲ್ಲಿ ಉಳಿಸಲಾಗದೆಂದು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ಅವರ ಸ್ವಪ್ರಯತ್ನದಿಂದ ಬ್ಯಾಂಕಿಂಗ್ ಪದ್ಧತಿಯ ಅಧ್ಯಯನ ನಡೆಸಿದ ನಾಲ್ವರು ಪ್ರಮುಖ ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಶ್ರೀ ಕಾಮರಾಜರಿಗೆ ಶ್ರೀ ಚಂದ್ರಶೇಖರ್ ಅವರು ಇಂದು ಸಲ್ಲಿಸಿದ ಈ ವರದಿಯಲ್ಲಿ ‘ಆರ್ಥಿಕ ಮತ್ತು ಸಾಮಾಜಿಕ ಪರಿಗಣನೆಗಳ ಆಧಾರದ ಮೇಲೆ ಮಾತ್ರವೇ’ ತಾವು ಬ್ಯಾಂಕ್‌ಗಳ ರಾಷ್ಟ್ರೀಕರಣಕ್ಕೆ ಒತ್ತಾಯ ಮಾಡುತ್ತಿರುವುದಾಗಿ ತಿಳಿಸಲಾಗಿದೆ.

Post Comments (+)