ಆರು ಜನರಿಗೆ ಮರಿದೇವರು ಪ್ರತಿಷ್ಠಾನ ಪ್ರಶಸ್ತಿ

ಬುಧವಾರ, ಜೂನ್ 26, 2019
22 °C

ಆರು ಜನರಿಗೆ ಮರಿದೇವರು ಪ್ರತಿಷ್ಠಾನ ಪ್ರಶಸ್ತಿ

Published:
Updated:

ಬೆಂಗಳೂರು: ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಸೇರಿ ವಿವಿಧ ಕ್ಷೇತ್ರಗಳ ಆರು ಸಾಧಕರು ಕನ್ನಡ ಸಾಹಿತ್ಯ ಪರಿಷತ್ತಿನ 2017ನೇ ಸಾಲಿನ

‘ಪ್ರೊ. ಸಿ.ಎಚ್‌. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ವಿ.ಪಿ. ನಿರಂಜನಾರಾಧ್ಯ (ಶಿಕ್ಷಣ), ಜರಗನಹಳ್ಳಿ ಶಿವಶಂಕರ (ಸಾಹಿತ್ಯ), ಎಲ್. ನಾರಾಯಣರೆಡ್ಡಿ (ಕೃಷಿ ಹಾಗೂ ನೀರಾವರಿ), ಪ್ರದೀಪಕುಮಾರ್ ಹೆಬ್ರಿ (ಕನ್ನಡ ಸೇವೆ) ಮತ್ತು ಪಿ. ಮಂಜುನಾಥ (ಸೆಪಕ್ ಟಕ್ರಾ–ಕ್ರೀಡೆ) ಅವರನ್ನು ಕ.ಸಾ.ಪ ಅಧ್ಯಕ್ಷ ಮನು ಬಳಿಗಾರ ಅಧ್ಯಕ್ಷತೆ ಸಮಿತಿ ಆಯ್ಕೆ ಮಾಡಿದೆ.

ತಲಾ ₹15,000 ನಗದು ಪುರಸ್ಕಾ ರವನ್ನು ಈ ಪ್ರಶಸ್ತಿ ಒಳಗೊಂಡಿದೆ. ಡಿ.8ರಂದು ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry