ಮಂಗಳವಾರ, ಸೆಪ್ಟೆಂಬರ್ 17, 2019
21 °C

ರಾಜಕಾಲುವೆ ದುರಸ್ತಿಗೆ ಆಗ್ರಹ

Published:
Updated:

ಬಳ್ಳಾರಿ: ನಗರದ 24ನೇ ವಾರ್ಡ್‌ ರಾಜಕಾಲುವೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದ ಮೊದಲನೇ ರೈಲ್ವೆ ಗೇಟ್‌ ಬಳಿ ಮಂಗಳವಾರ ಧರಣಿ ನಡೆಸಿದರು.

‘ಒಂದು ಕಿ.ಮೀ ಉದ್ದ ಕಾಲುವೆಯಲ್ಲಿ ತಾಜ್ಯ ಸಂಗ್ರಹವಾಗಿದೆ. ರಾಜಕಾಲುವೆ ಅಕ್ಕಪಕ್ಕದಲ್ಲಿ ವಾಸವಾಗಿರುವ ಸುಮಾರು 500 ಕುಟುಂಬಗಳು ದುರ್ನಾತದಲ್ಲಿಯೇ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಡೆಂಗಿ ಜ್ವರದಿಂದ ಬಳಲುತ್ತಿದ್ದಾರೆ’ ಎಂದು ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಆಕ್ರೋಶ ವ್ಯಕ್ತಪಡಿಸಿದರು.

‘ಈಗಾಗಲೇ ಕಾಲುವೆ ದುರಸ್ತಿಗೆ ಪಾಲಿಕೆಯಿಂದ ₹1.50 ಕೋಟಿ ಟೆಂಡರ್‌ಗೆ ಅನುಮೋದನೆ ದೊರೆತಿದೆ. ಆದರೆ, ನಾಲ್ಕು ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭವಾಗಿಲ್ಲ ’ ಎಂದು ಬೇಸರ ವ್ಯಕ್ತಪಡಿಸಿದರು. ಮುಖಂಡರಾದ ಓಬಳೇಶ್, ಆಶೋಕ್, ಗುಜರಿ ಬಸವರಾಜ್, ನೂರ್ ಅಹ್ಮದ್, ಅಲುವೇಲಮ್ಮ, ವೆಂಕಟರಮಣ, ಮೋತ್ಕರ್, ಮಲ್ಲನಗೌಡ ಭಾಗವಹಿಸಿದ್ದರು.

Post Comments (+)