ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಷಿಣ ಬೆಳೆಗೆ ಬುಡ ಕೊಳೆ ರೋಗ

Last Updated 25 ಅಕ್ಟೋಬರ್ 2017, 7:02 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯಲ್ಪಡುವ ಅರಿಷಿಣ ಬೆಳೆಯಲ್ಲಿ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಸುರಿದ ಮಳೆಯಿಂದ ಬುಡ ಕೊಳೆ ರೋಗ ಕಾಣಿಸಿಕೊಂಡಿದೆ ಎಂದು ರೈತರು ತಿಳಿಸಿದ್ದಾರೆ.

‘ಬೆಳೆಯ ಎಲೆಗಳಲ್ಲಿ ಚುಕ್ಕಿಗಳು ಕಾಣಿಸಿಕೊಂಡು ನಿಧಾನವಾಗಿ ಚುಕ್ಕೆ ಎಲೆಯ ತುಂಬಾ ವಿಸ್ತಾರಗೊಳ್ಳುತ್ತಾ ಸಾಗಿ ಕೊನೆಗೆ ಎಲೆ ಒಣಗಿದಂತಾಗುತ್ತದೆ. ಒಂದರ ನಂತರ ಒಂದರಂತೆ ಎಲ್ಲಾ ಎಲೆಗಳಲ್ಲೂ ಇದೇ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ’ ಎಂದು ದೇಗಲಮಡಿಯ ರೈತ ಸಿದ್ದು ಮಗಿ ತಿಳಿಸಿದ್ದಾರೆ.

‘ಅಧಿಕ ಮಳೆಯಿಂದ ಉಂಟಾಗುವ ತೇವಾಂಶ ಹೆಚ್ಚಳ ಮತ್ತು ಮೋಡ ಕವಿದ ವಾತಾವರಣದಿಂದ ಅರಿಷಿಣ ಬೆಳೆಗೆ ಬುಡ ಕೊಳೆ ರೋಗ ಬಂದಿದೆ. ಇದರ ನಿಯಂತ್ರಣಕ್ಕೆ ಕಾಪರ್‌ ಆಕ್ಸಿ ಕ್ಲೋರೈಡ್‌ 2 ಗ್ರಾಂ ಪ್ರತಿ ಲೀಟರ್‌ ಹಾಕಿ ಡ್ರೆಂಚಿಂಗ್‌ ಮಾಡಬೇಕು.

ಇದನ್ನು ನಿಯಂತ್ರಣಕ್ಕೆ ತರದಿದ್ದರೆ ಗಡ್ಡೆ ಕೊಳೆಯುವ ಸಾಧ್ಯತೆ ಹೆಚ್ಚಾಗುತ್ತದೆ’ ಎಂದು ರಾಯಚೂರು ಕೃಷಿ ವಿವಿಯ ಸಸ್ಯ ರೋಗ ತಜ್ಞ ಡಾ. ಜಹೀರ್‌ ಅಹಮದ್‌ ತಿಳಿಸಿದ್ದಾರೆ.

ಅಷಿರಿಣ ಬೆಳೆಯ ಗಿಡವೊಂದು ತಳಬಾಗದಿಂದ ಮೇಲ್ಭಾಗದವರೆಗೆ ಪೂರ್ಣಪ್ರಮಾಣದಲ್ಲಿ ಈ ರೂಗಕ್ಕೆ ತುತ್ತಾಗಿದ್ದರೆ ಅದರ ಗಡ್ಡೆ ಪೂರ್ಣಪ್ರಮಾಣದಲ್ಲಿ ಕರಗಿದೆ ಎಂದರ್ಥ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT