ರಾಹುಲ್‌ ರಾಜ್ಯ ಪ್ರವಾಸ ಮುಂದೂಡಿಕೆ

ಭಾನುವಾರ, ಜೂನ್ 16, 2019
30 °C

ರಾಹುಲ್‌ ರಾಜ್ಯ ಪ್ರವಾಸ ಮುಂದೂಡಿಕೆ

Published:
Updated:
ರಾಹುಲ್‌ ರಾಜ್ಯ ಪ್ರವಾಸ ಮುಂದೂಡಿಕೆ

ಬೆಂಗಳೂರು: ‘ನವೆಂಬರ್‌ 19ರಿಂದ ಮೂರು ದಿನ ನಿಗದಿಯಾಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ರಾಜ್ಯ ಪ್ರವಾಸವನ್ನು ಮುಂದೂಡಲಾಗಿದೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ.

ಇದೇ 29ರಂದು ದೆಹಲಿಯಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ಹೆಸರು ಅಂತಿಮಗೊಳ್ಳಬಹುದು. ತಮ್ಮ ಅಜ್ಜಿ, ಇಂದಿರಾ ಗಾಂಧಿ ಜನ್ಮದಿನವಾದ ನ. 19ರಂದು ರಾಹುಲ್‌ ಅವರು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಚಿಕ್ಕಮಗಳೂರಿನಲ್ಲಿ ನ.19ರಂದು ನಡೆಯಲಿದ್ದ ಇಂದಿರಾ ಗಾಂದಿ ಜನ್ಮ ಶತಮಾನೋತ್ಸವ, 20ರಂದು ಶಿವಮೊಗ್ಗದಲ್ಲಿ ಪಕ್ಷದ ಸಮಾವೇಶ, 21ರಂದು ಕುಮಟಾದಲ್ಲಿ ಮೀನುಗಾರರ ರಾಜ್ಯಮಟ್ಟದ ಸಮಾವೇಶದಲ್ಲೂ ರಾಹುಲ್‌ ಭಾಷಣ ಮಾಡುವವರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry