ತ್ಯಾಜ್ಯ ಪುನರ್‌ಬಳಕೆಗೆ ವ್ಯವಸ್ಥಿತ ಯೋಜನೆ

ಬುಧವಾರ, ಜೂನ್ 19, 2019
31 °C
ಘನ–ದ್ರವ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಇಂದು

ತ್ಯಾಜ್ಯ ಪುನರ್‌ಬಳಕೆಗೆ ವ್ಯವಸ್ಥಿತ ಯೋಜನೆ

Published:
Updated:
ತ್ಯಾಜ್ಯ ಪುನರ್‌ಬಳಕೆಗೆ ವ್ಯವಸ್ಥಿತ ಯೋಜನೆ

ಬ್ರಹ್ಮಾವರ: ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆಯ ರಾಜ್ಯದ ಪ್ರಾಯೋಗಿಕ ಯೋಜನೆಯು ಉಡುಪಿ ಜಿಲ್ಲೆಯ ಮೂರು ಪಂಚಾಯಿತಿಗೆ ಬಂದಿದ್ದು, ಈಗಾಗಲೇ ಜಿಲ್ಲೆಯ ವಂಡ್ಸೆ ಮತ್ತು ನಿಟ್ಟೆ ಪಂಚಾಯಿತಿಯಲ್ಲಿ ಆರಂಭಗೊಂಡಿದ್ದು, ಇದೀಗ ಬ್ರಹ್ಮಾವರದ ವಾರಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇದೇ 26ರಂದು ಉದ್ಘಾಟನೆಗೊಳ್ಳಲಿದೆ.

ವೆಲ್ಲೂರಿನ ಇಂಡಿಯನ್ ಗ್ರೀನ್ ಸರ್ವೀಸ್‌ನ ಯೋಜನಾ ನಿರ್ದೇಶಕ ವೆಲ್ಲೂರು ಶ್ರೀನಿವಾಸನ್ ವರದಿಯನ್ವಯ ರಾಜ್ಯ ಸರ್ಕಾರವು ಪ್ರಾಯೋಗಿಕವಾಗಿ ಜಿಲ್ಲೆಯ ಮೂರು ಗ್ರಾಮವನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಈಗಾಗಲೇ ಆರಂಭಗೊಂಡ ವಂಡ್ಸೆ ಮತ್ತು ನಿಟ್ಟೆ ಪಂಚಾಯಿತಿಯಲ್ಲಿ ಕಾರ್ಯಾರಂಭಗೊಂಡು ಯಶಸ್ಸು ಕಂಡಿದೆ. ತ್ಯಾಜ್ಯವನ್ನು ಮೂಲದಿಂದ ಸಂಗ್ರಹಿಸಿ, ಘಟಕಕ್ಕೆ ಸಾಗಿಸಿ ಅಲ್ಲಿ ವಿಂಗಡಿಸಿ ಸಂಪನ್ಮೂಲವಾಗಿ ಪರಿವರ್ತಿ ಸಲಾಗುತ್ತದೆ. ಇದರಿಂದ ಆಯಾ ಗ್ರಾಮ ಪಂಚಾಯಿತಿಗೆ ಆದಾಯವೂ ಬರುತ್ತದೆ.

ಎನಿದು ಯೋಜನೆ?: ವಾರಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3,200 ಮನೆಗಳಿದ್ದು ಪ್ರಾರಂಭದಲ್ಲಿ 500 ಮನೆಗಳಿಗೆ ಹಸಿರು ಮತ್ತು ಕೆಂಪು ಬಣ್ಣದ ಎರಡು ಬಕೆಟ್‌ ನೀಡಲಾಗುತ್ತದೆ. ಹಸಿರು ಬಣ್ಣದ ಬಕೆಟ್‌ ಹಸಿ ತ್ಯಾಜ್ಯ ಮತ್ತು ಕೆಂಪು ಬಣ್ಣದ ಬಕೆಟ್‌ನಲ್ಲಿ ಒಣ ತ್ಯಾಜ್ಯವನ್ನು ಹಾಕಬೇಕು. ಆ ತ್ಯಾಜ್ಯವನ್ನು ದಿನಕ್ಕೆ ಎರಡು ಬಾರಿ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಗಳು ಸಂಗ್ರಹಿಸಿ ಘಟಕ್ಕೆ ತಂದು ಬೇರ್ಪಡಿಸಿ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿಸಿ ಪರಿ ವರ್ತಿಸುತ್ತಾರೆ. ಸಂಪನ್ಮೂಲಗೊಂಡ ತ್ಯಾಜ್ಯವನ್ನು ವಿವಿಧ ರೂಪದಲ್ಲಿ ವಿಂಗಡಿಸಿ ಪುನರ್ ಬಳಕೆಗೆ ಸಿದ್ಧಪಡಿ ಸಲಾಗುತ್ತದೆ. ಪ್ರತಿ ಮನೆಯಿಂದ ತಲಾ ₹3 ಸಂಗ್ರಹವನ್ನೂ ಇದರೊಂದಿಗೆ ಮಾಡಲಾಗುತ್ತದೆ. ಗ್ರಾಮ ಪಂಚಾಯಿ ತಿಯ ವತಿಯಿಂದಲೇ ಬಕೆಟ್‌ಗಳನ್ನು ನೀಡಲಾಗುತ್ತದೆ.

ತ್ಯಾಜ್ಯವನ್ನು ವಿವಿಧ ರೂಪದಲ್ಲಿ ವಿಗಂಡಿಸಿ ಪುರ್ನಬಳಕೆಯ ಉದ್ದೇಶದಿಂದ ಘಟಕದಲ್ಲಿ ದನ, ನಾಯಿ, ಬಾತುಕೋಳಿ, ಮೀನುಗಳನ್ನು ಸಾಕಲಾಗುತ್ತದೆ.

ವಿಂಗಡಿಸಿದ ತ್ಯಾಜ್ಯವನ್ನು ಅನೂಕೂ ಲಕ್ಕೆ ತಕ್ಕಂತೆ ಅವುಗಳಿಗೆ ಹಾಕಿ ಸಾಕಲಾ ಗುತ್ತದೆ. ಇದಲ್ಲದೇ ದ್ರವ ತ್ಯಾಜ್ಯದ ವಸ್ತುಗಳಿಗೆ ಕೆಲವು ಹೂವು ಮತ್ತು ತರಕಾರಿ ಗಿಡಗಳನ್ನು ನೆಡುವ ಬಗ್ಗೆಯೂ ಈ ಘಟಕದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಉದ್ಯೋಗ ಸೃಷ್ಟಿ: ಈ ಯೋಜನೆಯಿಂದ ತ್ಯಾಜ್ಯದ ಸಮಸ್ಯೆ ಪರಿಹಾರದ ಜತೆಗೆ ಉದ್ಯೋಗ ಸೃಷ್ಟಿಯೂ ಆಗುತ್ತಿದೆ. ತ್ಯಾಜ್ಯವನ್ನು ಘಟಕಕ್ಕೆ ತರಲು, ಘಟಕಕ್ಕೆ ತಂದ ತ್ಯಾಜ್ಯವನ್ನು ಬೇರ್ಪಡಿಸಲು, ಬೇರ್ಪಡಿಸಿದ ತ್ಯಾಜ್ಯವನ್ನು ಸಂಪನ್ಮೂ ಲವನ್ನಾಗಿಸಲು ಒಟ್ಟು 15 ಜನ ಸಿಬ್ಬಂದಿ ನೇಮಕವಾಗಿದ್ದು, ಸದ್ಯ ಪಂಚಾಯಿ ತಿಯಿಂದ ಸಂಬಳವನ್ನು ನಿಗದಿ ಪಡಿಸಲಾಗಿದೆ.

ಬ್ರಹ್ಮಾವರದ ವಾರಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟಕವನ್ನು ಆರಂಭಿಸಲಾಗಿದ್ದು, ಪರಿಸರದ ಗ್ರಾಮ ಪಂಚಾಯಿತಿಯ ತ್ಯಾಜ್ಯ ಪದಾರ್ಥಗಳನ್ನು ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಈ ಬಗ್ಗೆ ಬ್ರಹ್ಮಾವರ ಪ್ರೆಸ್‌ ಕ್ಲಬ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಡಿಓ ಮಹೇಶ್‌ ಕೆ., ಅಧ್ಯಕ್ಷ ನವೀನ್ಚಂದ್ರ ನಾಯಕ್, ಗಾಯತ್ರಿ, ಮಾಜಿ ಅಧ್ಯಕ್ಷ ನಿತ್ಯಾನಂದ ಬಿ.ಆರ್, ಸದಸ್ಯರಾದ ದೇವಾನಂದ, ರಾಜು ಸಾಲಿಯನ್ ಉಪಸ್ಥಿತರಿದ್ಧರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry