ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್‌: ಜಾರ್ಖಂಡ್‌ಗೆ ಜಯ

Last Updated 27 ಅಕ್ಟೋಬರ್ 2017, 19:49 IST
ಅಕ್ಷರ ಗಾತ್ರ

ರಾಂಚಿ: ಶಹಬಾಜ್ ನದೀಮ್ ಆರು ವಿಕೆಟ್ ಗಳಿಸಿ ಎದುರಾಳಿಗಳನ್ನು ಎರಡನೇ ಇನಿಂಗ್ಸ್‌ನಲ್ಲಿ ಕಟ್ಟಿ ಹಾಕಿದರು. ಇದರ ಪರಿಣಾಮ ಜಾರ್ಖಂಡ್ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಹರಿಯಾಣ ವಿರುದ್ಧ 10 ವಿಕೆಟ್‌ ಜಯ ಸಾಧಿಸಿತು.

ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾ ಯಗೊಂಡ ಪಂದ್ಯದಲ್ಲಿ 80 ರನ್‌ಗಳ ಜಯದ ಗುರಿ ಬೆನ್ನತ್ತಿದ ಜಾರ್ಖಂಡ್‌ ಈಶನ್ ಕಿಶನ್ ಮತ್ತು ನಜೀಮ್ ಸಿದ್ದಿಕಿ ಅವರ ತಾಳ್ಮೆಯ ಬ್ಯಾಟಿಂಗ್ ಮೂಲಕ ವಿಕೆಟ್ ಕಳೆದುಕೊಳ್ಳದೇ ಗೆಲುವಿನ ನಗೆ ಸೂಸಿತು.

ಇತರ ಪಂದ್ಯಗಳಲ್ಲಿ ರೈಲ್ವೇಸ್‌ ಇನಿಂಗ್ಸ್ ಮತ್ತು 184 ರನ್‌ಗಳಿಂದ ಅಸ್ಸಾಂ ಎದುರು, ಮಹಾರಾಷ್ಟ್ರ 31 ರನ್‌ಗಳಿಂದ ಉತ್ತರ ಪ್ರದೇಶ ಎದುರು, ಕೇರಳ 131 ರನ್‌ಗಳಿಂದ ರಾಜಸ್ತಾನ ವಿರುದ್ಧ, ಪಂಜಾಬ್ ಇನಿಂಗ್ಸ್ ಮತ್ತು 133 ರನ್‌ಗಳಿಂದ ಗೋವಾ ವಿರುದ್ಧ, ಹಿಮಾಚಲ ಪ್ರದೇಶ 97 ರನ್‌ಗಳಿಂದ ಸರ್ವಿಸಸ್‌ ಎದುರು ಜಯ ದಾಖಲಿಸಿತು. ಆಂಧ್ರ ಮತ್ತು ಒಡಿಶಾ, ಮುಂಬೈ ಮತ್ತು ತಮಿಳುನಾಡು, ವಿದರ್ಭ ಮತ್ತು ಛತ್ತೀಸಗಢ ನಡುವಿನ ಪಂದ್ಯಗಳು ಡ್ರಾಗೊಂಡವು. ಗುಜರಾತ್ ಮತ್ತು ಮಧ್ಯಪ್ರದೇಶ ತಂಡಗಳು ಮೂರನೇ ದಿನವೇ ಜಯ ಸಾಧಿಸಿದ್ದವು.

ಸಂಕ್ಷಿಪ್ತ ಸ್ಕೋರ್‌

ಎ ಗುಂಪು

ಅಸ್ಸಾಂ: 93.2 ಓವರ್‌ಗಳಲ್ಲಿ 244; ರೈಲ್ವೇಸ್‌: 138.4 ಓವರ್‌ಗಳಲ್ಲಿ 7ಕ್ಕೆ483; ಅಸ್ಸಾಂ: 32.3 ಓವರ್‌ಗಳಲ್ಲಿ 55ಕ್ಕೆ ಆಲೌಟ್‌. ಮಹಾರಾಷ್ಟ್ರ: 106.1 ಓವರ್‌ಗಳಲ್ಲಿ 312; ಉತ್ತರ ಪ್ರದೇಶ: 82.2 ಓವರ್‌ಗಳಲ್ಲಿ 271; ಮಹಾರಾಷ್ಟ್ರ: 84 ಓವರ್‌ಗಳಲ್ಲಿ 7ಕ್ಕೆ282; ಉತ್ತರ ಪ್ರದೇಶ: 68 ಓವರ್‌ಗಳಲ್ಲಿ 292ಕ್ಕೆ ಆಲೌಟ್‌.

ಬಿ ಗುಂಪು

ಹರಿಯಾಣ: 75.4 ಓವರ್‌ಗಳಲ್ಲಿ 208 ಮತ್ತು 113 ಓವರ್‌ಗಳಲ್ಲಿ 296; ಜಾರ್ಖಂಡ್‌: 133.5 ಓವರ್‌ಗಳಲ್ಲಿ 9ಕ್ಕೆ 425 ಮತ್ತು 10.4 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 81. ಕೇಳರ: 118.3 ಓವರ್‌ಗಳಲ್ಲಿ 335; ರಾಜಸ್ತಾನ: 82.3 ಓವರ್‌ಗಳಲ್ಲಿ 243; ಕೇರಳ: 50.4 ಓವರ್‌ಗಳಲ್ಲಿ 4ಕ್ಕೆ250; ರಾಜಸ್ತಾನ: 83.4 ಓವರ್‌ಗಳಲ್ಲಿ 211ಕ್ಕೆ ಆಲೌಟ್‌.

ಸಿ ಗುಂಪು

ಆಂಧ್ರ: 166 ಓವರ್‌ಗಳಲ್ಲಿ 5ಕ್ಕೆ 584; ಒಡಿಶಾ: 139.3 ಓವರ್‌ಗಳಲ್ಲಿ 391 ಮತ್ತು 55 ಓವರ್‌ಗಳಲ್ಲಿ 7ಕ್ಕೆ152 (ವಿಪ್ಲವ್‌ ಸಾಮಂತ್ರಿ 62, ಭಾರ್ಗವ ಭಟ್‌ 40ಕ್ಕೆ4). ಮುಂಬೈ: 103.1 ಓವರ್‌ಗಳಲ್ಲಿ 374; ತಮಿಳುನಾಡು; 142 ಓವರ್‌ಗಳಲ್ಲಿ 450; ಮುಂಬೈ: 95 ಓವರ್‌ಗಳಲ್ಲಿ 5ಕ್ಕೆ 371 (ಅಖಿಲ್ ಹೇರ್ವಾಡ್ಕರ್‌ 132, ಶ್ರೇಯಸ್ ಅಯ್ಯರ್‌ 138).

ಡಿ ಗುಂಪು

ಪಂಜಾಬ್‌: 148.5 ಓವರ್‌ಗಳಲ್ಲಿ 635; ಗೋವಾ:79.4 ಓವರ್‌ಗಳಲ್ಲಿ 246 ಮತ್ತು 88.1 ಓವರ್‌ಗಳಲ್ಲಿ 256 (ವಿನಯ್‌ ಚೌಧರಿ 57ಕ್ಕೆ3, ರಘು ಶರ್ಮಾ 117ಕ್ಕೆ3). ಹಿಮಾಚಲ ಪ್ರದೇಶ: 116.3 ಓವರ್‌ಗಳಲ್ಲಿ 364; ಸರ್ವಿಸಸ್‌: 76.3 ಓವರ್‌ಗಳಲ್ಲಿ 215; ಹಿಮಾಚಲ ಪ್ರದೇಶ: 76.3 ಓವರ್‌ಗಳಲ್ಲಿ 215; ಸರ್ವಿಸಸ್‌: 78.4 ಓವರ್‌ಗಳಲ್ಲಿ 228. ಛತ್ತೀಸಗಢ: 163.2 ಓವರ್‌ಗಳಲ್ಲಿ 489; ವಿದರ್ಭ: 124.4 ಓವರ್‌ಗಳಲ್ಲಿ 435; ಛತ್ತೀಸಗಢ: 52 ಓವರ್‌ಗಳಲ್ಲಿ 9ಕ್ಕೆ 195 (ಉಮೇಶ್‌ ಯಾದವ್ 50ಕ್ಕೆ3, ಅಕ್ಷಯ್ ಕರ್ಣೇಶ್ವರ್‌ 43ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT