ಕ್ರಿಕೆಟ್‌ ಟೂರ್ನಿ: ಪ್ರಶಸ್ತಿ ಹಂಚಿಕೊಂಡ ಹೋಲಿ ಸೇಂಟ್‌

ಸೋಮವಾರ, ಜೂನ್ 17, 2019
26 °C

ಕ್ರಿಕೆಟ್‌ ಟೂರ್ನಿ: ಪ್ರಶಸ್ತಿ ಹಂಚಿಕೊಂಡ ಹೋಲಿ ಸೇಂಟ್‌

Published:
Updated:
ಕ್ರಿಕೆಟ್‌ ಟೂರ್ನಿ: ಪ್ರಶಸ್ತಿ ಹಂಚಿಕೊಂಡ ಹೋಲಿ ಸೇಂಟ್‌

ಬೆಂಗಳೂರು: ಹೋಲಿ ಸೇಂಟ್‌ ಆಂಗ್ಲ ಶಾಲೆ ತಂಡದವರು ಕೆಎಸ್‌ಸಿಎ ಕಪ್‌ಗಾಗಿ ನಡೆದ 16 ವರ್ಷದೊಳಗಿನವರ ಗುಂಪು–1, ಡಿವಿಷನ್‌–1ರ ಕ್ರಿಕೆಟ್‌ ಲೀಗ್‌ ಟೂರ್ನಿಯಲ್ಲಿ ಎಬೆನೆಜರ್‌ ಇಂಟರ್‌ನ್ಯಾಷನಲ್‌ ಶಾಲೆಯ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದಾರೆ.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಎಬೆನೆಜರ್‌ ಶಾಲೆ 44.2 ಓವರ್‌ಗಳಲ್ಲಿ 60ರನ್‌ಗಳಿಗೆ ಆಲೌಟ್‌ ಆಯಿತು. ಗುರಿ ಬೆನ್ನಟ್ಟಿದ ಹೋಲಿ ಸೇಂಟ್‌ ತಂಡ 35 ಓವರ್‌ಗಳಲ್ಲಿ 6 ವಿಕೆಟ್‌ಗೆ 40ರನ್‌ ಗಳಿಸಿದ್ದ ವೇಳೆ ಮಳೆ ಸುರಿಯಿತು. ಹೀಗಾಗಿ ಪಂದ್ಯ ರದ್ದು ಮಾಡಲಾಯಿತು.

ಹೋಲಿ ಸೇಂಟ್‌ ತಂಡದ ಅರ್ಜುನ್‌ ಪರಿಣಾಮಕಾರಿ ದಾಳಿ ನಡೆಸಿ ಗಮನ ಸೆಳೆದರು. ಅವರು 22ರನ್‌ ನೀಡಿ 7 ವಿಕೆಟ್‌ ಉರುಳಿಸಿದರು. ಕೃಷ್ಣಮೂರ್ತಿ (13ಕ್ಕೆ3) ಉತ್ತಮ ಬೌಲಿಂಗ್‌ ನಡೆಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry