ಕಸ ವಿಲೇವಾರಿ: ಬೇಕಿದೆ ನಾಗರಿಕ ಪ್ರಜ್ಞೆ

ಗುರುವಾರ , ಜೂನ್ 20, 2019
27 °C

ಕಸ ವಿಲೇವಾರಿ: ಬೇಕಿದೆ ನಾಗರಿಕ ಪ್ರಜ್ಞೆ

Published:
Updated:

ರಾಮನಗರ: ಪ್ರತಿನಿತ್ಯ ಬೆಳಿಗ್ಗೆ ಸಮ ಯದಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ನಗರಸಭೆ ವ್ಯಾಪ್ತಿಯಲ್ಲಿ ಜಾರಿಯಲ್ಲಿದೆ. ಮನೆಮನೆ ಯಿಂದ ಹಲವು ಮನೆ ಮಾಲೀಕರು ಸ್ಪಂದಿಸುತ್ತಿದ್ದಾರೆ. ಆದರೆ ಕೆಲವು ಅಂಗಡಿ ಮಾಲೀಕರು ಕಸವನ್ನು ರಸ್ತೆಗೆ ಚೆಲ್ಲುತ್ತಿದ್ದಾರೆ.

ಐಜೂರು ವೃತ್ತದಲ್ಲಿ ಬೆಳಿಗ್ಗೆ ಹೊತ್ತು ಬಂದು ನಿಂತರೆ ಅಲ್ಲಿ ಸುತ್ತಲಿನ ಅಂಗಡಿಗಳ ಕಸವು ರಸ್ತೆಯಲ್ಲಿ ಬಿದ್ದಿರುವುದನ್ನು ಕಾಣಬಹುದು. ಕಸ ಸಂಗ್ರಹಿಸುವವರಿಗೆ ಕಾದು ತ್ಯಾಜ್ಯವನ್ನು ನೀಡುವಂತತ ಪ್ರವೃತ್ತಿಯನ್ನು ಇಲ್ಲಿನವರು ಬೆಳೆಸಿಕೊಂಡಂತೆ ಇಲ್ಲ.

ಇವರು ಬಿಸಾಡುವ ತ್ಯಾಜ್ಯ ಅಲ್ಲೇ ಕೊಳೆತು ನಾರುತ್ತಿದೆ. ಇದರಿಂದ ರೋಗರುಜಿನಗಳು ಹರಡುತ್ತವೆ. ಅಂಗಡಿ ಮಾಲೀಕರು ತಾವೇ ಮುತು ವರ್ಜಿ ವಹಿಸಿ ತ್ಯಾಜ್ಯವನ್ನು ನಗರಸಭೆ ಕಸದ ವಾಹನಕ್ಕೆ ಹಾಕಬೇಕಾಗಿದೆ.

‘ದಿನನಿತ್ಯ ತಮ್ಮ ಮಳಿಗೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ, ಪ್ಲಾಸ್ಟಿಕ್‌ ಶೀಟ್‌ಗಳು, ಕವರ್‌ಗಳು ಇತ್ಯಾದಿಗಳನ್ನು ರಸ್ತೆ ಬದಿಯಲ್ಲಿ ಬಿಸಾಡುತ್ತಿದ್ದಾರೆ. ಹೀಗಾಗಿ ನಗರಸ ಭೆಯ ಅಧಿಕಾರಿಗಳು ಕೂಡಲೇ ಸಂಬಂಧಪಟ್ಟ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೋಟಿಸ್‌ ಜಾರಿ ಮಾಡಬೇಕು’ಎನ್ನುತ್ತಾರೆ ಗಾಂಧಿನ ಗರದ ನಿವಾಸಿ ಹನುಮಂತಪ್ಪ.

‘ತ್ಯಾಜ್ಯವನ್ನು ಕಸ ಸಂಗ್ರಹ ವಾಹನಕ್ಕೆ ಕಡ್ಡಾಯವಾಗಿ ಹಾಕಬೇಕು ಎಂದು ಸೂಚನೆ ನೀಡಬೇಕು. ಬಹುಶಃ ಬೆಳಗಿನ ಸಮಯದಲ್ಲಿ ವಾಹನವು ಅಂಗಡಿ ಬಾಗಿಲು ತೆಗೆಯುವ ಮುನ್ನ ಬರುವುದು ಸಮಸ್ಯೆಯಾಗಿರಬಹುದು. ಮಧ್ಯಾಹ್ನ ತ್ಯಾಜ್ಯ ಸಂಗ್ರಹಿಸುವ ವಾಹನದ ವ್ಯವಸ್ಥೆಯನ್ನು ಜಾರಿ ಮಾಡಿದರೆ ಅಂಗಡಿ ಮಾಲೀಕರು ಸ್ಪಂದಿಸಬಹುದು’ ಎನ್ನುತ್ತಾರೆ ವಿವೇಕಾನಂದನಗರದ ವರ್ತಕ ಚಂದ್ರಶೇಖರ್‌.

ಕಸವನ್ನು ವಾಹನಕ್ಕೆ ಹಾಕಿ: ‘ಮನೆಯ ವರಾಗಲಿ, ಅಂಗಡಿ ಯವರಾಗಲಿ ಕಸವನ್ನು ಸಂಗ್ರಹಿಸಿಟ್ಟುಕೊಂಡು ನಗರಸ ಭೆಯ ಕಸವನ್ನು ಸಂಗ್ರಹಿಸುವ ವಾಹನಕ್ಕೆ ಹಾಕಬೇಕು. ಇದರಿಂದ ನಗರದ ಸೌಂದರ್ಯ ಕಾಪಾಡುವ ಜತೆಗೆ ಹಲವು ಅನುಕೂಲಗಳಾಗುತ್ತದೆ’ ಎನ್ನುತ್ತಾರೆ ನಗರಸಭೆ ಆಯುಕ್ತ ಕೆ. ಮಾಯಣ್ಣಗೌಡ.

‘ನಗರಸಭೆ ವ್ಯಾಪ್ತಿಯಲ್ಲಿ ಕಸವನ್ನು ಸಂಗ್ರಹಿಸಲು 16 ಆಟೊಗಳು, ನಾಲ್ಕು ಟ್ರ್ಯಾಕ್ಟರ್‌, ಮೂರು ಟ್ರೈಲರ್‌, ಒಂದು ಕಾಂಪೆಕ್ಟರ್‌ ಹಾಗೂ ಒಂದು ಲಾರಿ ಇದೆ. ಜನರು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹೊಸದಾಗಿ ಕಸ ಸಂಗ್ರಹಿಸುವ ಎಂಟು ಆಟೊಗಳು ಬರಲಿವೆ’ ಎಂದು ಅವರು ತಿಳಿಸಿದರು.

‘ನಗರದಲ್ಲಿ ಕೆಲವು ದಿನಗಳ ಹಿಂದೆ ಕಸದ ಸಮಸ್ಯೆ ಉಲ್ಬಣವಾಗಿತ್ತು. ಆದರೆ ಈಗ ತಾತ್ಕಾಲಿಕವಾಗಿ ಕಸದ ವಿಲೇವಾರಿ ಸಮಸ್ಯೆ ಬಗೆಹರಿದಿದೆ’ ಎಂದು ಅವರು ಹೇಳಿದರು.

‘ನಗರದ ಕಸದ ವ್ಯವಸ್ಥೆ ಬಗೆಹರಿ ಯಲು ಜನರೂ ಸ್ಪಂದಿಸಬೇಕಾಗಿದೆ. ಕಸದ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯರು ಮನಸ್ಸು ಮಾಡಬೇಕು.

ಇಲ್ಲಿ ಕಸ ಹಾಕುವುದು ಬೇಡ, ಅಲ್ಲಿ ಕಸ ವಿಲೇವಾರಿ ಮಾಡುವುದು ಬೇಡ ಎಂದರೆ ಈ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ವಿಜಯನಗರದ ನಿವಾಸಿ ಜಗದೀಶ್‌ ಮೂರ್ತಿ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry