ಕ್ರಿಕೆಟಿಗರ ಪರೀಕ್ಷೆಗೆ ಕೇಂದ್ರ ಸೂಚನೆ

ಬುಧವಾರ, ಜೂನ್ 26, 2019
22 °C

ಕ್ರಿಕೆಟಿಗರ ಪರೀಕ್ಷೆಗೆ ಕೇಂದ್ರ ಸೂಚನೆ

Published:
Updated:

ನವದೆಹಲಿ: ಉದ್ದೀಪನ ಔಷಧಿ ಸೇವನೆಗೆ ಸಂಬಂಧಿಸಿ ಕ್ರಿಕೆಟ್ ಆಟಗಾರರನ್ನು ಕೂಡ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರ ರಾಷ್ಟ್ರೀಯ ಉದ್ದೀಪನ ಔಷಧಿ ಪತ್ತೆ ಘಟಕಕ್ಕೆ ಸೂಚಿಸಿದೆ.

ಅಂತರರಾಷ್ಟ್ರೀಯ ಉದ್ದೀಪನ ಔಷಧಿ ನಿಷೇಧ ಘಟಕದ (ವಾಡಾ) ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೂಡ ನಾಡಾಗೆ ತಾಕೀತು ಮಾಡಿದೆ. ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಕಾರಣ ಈ ಕ್ರಮಕ್ಕೆ ಕ್ರೀಡಾ ಇಲಾಖೆ ಮುಂದಾಗಿದೆ.

ಉದ್ದೀಪನ ಮದ್ದು ನಿಷೇಧಕ್ಕೆ ಸಂಬಂಧಿಸಿ ವಾಡಾದಿಂದ ಪತ್ರ ಬಂದಿದೆ ಎಂದು ಕ್ರೀಡಾ ಸಚಿವಾಲಯದ ನೂತನ ಕಾರ್ಯದರ್ಶಿ ರಾಹುಲ್ ಭಟ್ನಾಗರ್‌ ತಿಳಿಸಿದ್ದು ಇದರ ಬೆನ್ನಲ್ಲೇ ನಾಡಾ ಬಿಸಿಸಿಐನ ಆಡಳಿತ ಸಮಿತಿಗೆ ಪತ್ರ ಬರೆದಿದೆ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.

ಉದ್ದೀಪನ ಔಷಧಿ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಲು ವಿಫಲವಾದರೆ ಭಾರತದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಡಾಗೆ ವಾಡಾ ಎಚ್ಚರಿಕೆ ನೀಡಿದೆ ಎಂದೂ ತಿಳಿದು ಬಂದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry