ಸೋಮವಾರ, ಸೆಪ್ಟೆಂಬರ್ 16, 2019
21 °C

ಅಮಿತಾಭ್‌ ನೃತ್ಯಕ್ಕೆ ಪ್ರಭುದೇವ ನಿರ್ದೇಶನ

Published:
Updated:
ಅಮಿತಾಭ್‌ ನೃತ್ಯಕ್ಕೆ ಪ್ರಭುದೇವ ನಿರ್ದೇಶನ

ಇತ್ತೀಚೆಗಷ್ಟೇ 75ರ ಹರೆಯಕ್ಕೆ ಕಾಲಿಟ್ಟಿರುವ ‘ಬಿಗ್‌ ಬಿ’ ಅಮಿತಾಭ್ ಬಚ್ಚನ್ ಅವರಿಗೆ ಖ್ಯಾತ ನೃತಪಟು ಪ್ರಭುದೇವ ನೃತ್ಯ ಕಲಿಸಿಕೊಡಲಿದ್ದಾರಂತೆ. ಸಿನಿಮಾವೊಂದರ ಹಾಡಿಗಾಗಿ ಅಮಿತಾಭ್‌ಗೆ ಪ್ರಭುದೇವ ನೃತ್ಯ ನಿರ್ದೇಶನ ಮಾಡುತ್ತಿದ್ದು, ಈ ಬಗ್ಗೆ ಸ್ವತಃ ಅಮಿತಾಭ್ ತಮ್ಮ ಟ್ವಿಟರ್ ಖಾತೆಯಲ್ಲಿ ಭಾನುವಾರ ಬರೆದುಕೊಂಡಿದ್ದಾರೆ.

‘75ರ ವಯಸ್ಸಿನಲ್ಲಿ ಪ್ರತಿಭಾವಂತ ನೃತ್ಯ ನಿರ್ದೇಶಕ ಪ್ರಭುದೇವ ನನಗೆ ನೃತ್ಯ ಹೇಳಿಕೊಡುತ್ತಿದ್ದಾರೆ’ ಎಂದು ಅಮಿತಾಭ್ ಖುಷಿಯಿಂದ ಬರೆದು ಕೊಂಡಿದ್ದಾರೆ. ಯಾವ ಸಿನಿಮಾಕ್ಕಾಗಿ ಈ ನೃತ್ಯ ಎಂಬ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ.

ಪ್ರಸ್ತುತ ಕಿರುತೆರೆಯಲ್ಲಿ ‘ಕೌನ್‌ ಬನೇಗಾ ಕರೋಡ್‌ಪತಿ’ ರಿಯಾಲಿಟಿ ಷೋನಲ್ಲಿ ಬ್ಯುಸಿಯಾಗಿರುವ ಅಮಿತಾಭ್‌ ಕೈಯಲ್ಲಿ ‘102 ನಾಟ್ ಔಟ್‌’ ಎನ್ನುವ ಚಿತ್ರವಿದೆ.

Post Comments (+)