ಸಿಡಬ್ಲ್ಯುಸಿಗೆ ಜಯ

ಕಲಬುರ್ಗಿ: ಕಾರ್ಪೊರೇಟ್ ವುಮೆನ್ ಕ್ರಿಕೆಟರ್ಸ್ (ಸಿಡಬ್ಲ್ಯುಸಿ) ತಂಡವು ವಿಜಯಪುರ ವುಮೆನ್ಸ್ ಕ್ರಿಕೆಟ್ ಕ್ಲಬ್ ವಿರುದ್ಧ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಸಿಡಬ್ಲ್ಯುಸಿ ಮತ್ತು ರಾಯಲ್ ಬೆಂಗಳೂರು ತಂಡಗಳು ಟೂರ್ನಿಯಲ್ಲಿ ತಲಾ ಎರಡು ಪಂದ್ಯಗಳಲ್ಲಿ ಗೆದ್ದಿದ್ದು, 8 ಪಾಯಿಂಟ್ಸ್ ಗಳಿಸಿವೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ ವತಿಯಿಂದ ಇಲ್ಲಿನ ಎನ್.ವಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಟ್ವೆಂಟಿ–20 ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಗುರು ವಾರ ನಡೆದ ಪಂದ್ಯದಲ್ಲಿ ವಿಜಯಪುರ ತಂಡ ಮೊದಲು ಬ್ಯಾಟಿಂಗ್ ಮಾಡಿತು.
ಸಿಡಬ್ಲ್ಯುಸಿ ತಂಡದ ಶಿಸ್ತಿನ ಬೌಲಿಂಗ್ ವಿಜಯಪುರ ತಂಡ ತತ್ತರಿಸಿತು. ಜುಬೇದಾ ಬಾನು 54 ಎಸೆತಗಳಲ್ಲಿ ಮೂರು ಬೌಂಡರಿ ಸಹಿತ 38 ರನ್ ಗಳಿಸಿದರು.. ಅಂತಿಮವಾಗಿ ತಂಡ 18.2 ಓವರ್‌ಗಳಲ್ಲಿ 83ಕ್ಕೆ ಆಲ್‌ಔಟ್ ಆಯಿತು. ಗುರಿ ಬೆನ್ನತ್ತಿದ ಸಿಡಬ್ಲ್ಯುಸಿ ತಂಡ 12 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 86 ರನ್ ಗಳಿಸುವ ಮೂಲಕ ಸುಲಭವಾಗಿ ಜಯಿಸಿತು.
ಸಂಕ್ಷಿಪ್ತ ಸ್ಕೋರ್: ವಿಜಯಪುರ ವುಮೆನ್ಸ್ ಕ್ರಿಕೆಟ್ ಕ್ಲಬ್: 83 ರನ್ (ಜುಬೇದಾ ಬಾನು 38, ತಸ್ಲಿಮ್ ಜಾಗೀರದಾರ್ 16, ವಿಭಾರಾಣಿ ಎಂ.ನೀವರಗಿ 17ಕ್ಕೆ 4, ವಿ.ಕೆ.ಲಕ್ಷ್ಮಿ 21ಕ್ಕೆ 3, ಎಸ್.ಎಸ್.ಲಕ್ಷ್ಮಿ 1 ರನ್‌ಗೆ 2).
ಸಿಡಬ್ಲ್ಯುಸಿ: 3 ವಿಕೆಟ್‌ಗೆ 86 (ವಿ.ಕೆ.ಲಕ್ಷ್ಮಿ 40, ನಿವೇದಿತಾ ರೇಶ್ಮೆ 13, ಪದ್ಮಶ್ರೀ 28ಕ್ಕೆ1, ಎಸ್ ಶಿಲ್ಪಾ 15ಕ್ಕೆ1). ರಾಯಲ್ ಬೆಂಗಳೂರು 3ಕ್ಕೆ178 (ಶ್ರುತಿ 74, ಗೀತಾ ಶಶಿ 60, ಎಸ್.ಜಿ.ಅಭಿಲಾಷಾ 25ಕ್ಕೆ 2).
ಗ್ಯಾಲಕ್ಸಿ ಸಿಸಿ: 97 (ದಿಯಾ ಜೈನ್ 20, ಭವ್ಯಾ 18, ಟಿ.ಬಿಂದಿಯಾ 11; ನಿವೇದಿತಾ 7ಕ್ಕೆ 2, ಕೆ.ಪೂಜಾ 14ಕ್ಕೆ 2, ಮೀನಾ 14ಕ್ಕೆ 2).
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.