ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿಎನ್‌ ಸಮಸ್ಯೆ; ರಾಜ್ಯಗಳಿಗೆ ಇನ್ಫೊಸಿಸ್ ತಜ್ಞರು

Last Updated 3 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ರಿಟರ್ನ್ ಸಲ್ಲಿಕೆ ಸರಳಗೊಳಿಸಲು ಜಿಎಸ್‌ಟಿಎನ್‌ ಜಾಲತಾಣದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಇನ್ಫೊಸಿಸ್‌ ಸಂಸ್ಥೆಯು ಇನ್ನಷ್ಟು ತಜ್ಞರು ಮತ್ತು ಎಂಜಿನಿಯರ್‌ಗಳನ್ನು ರಾಜ್ಯಗಳಿಗೆ ಕಳುಹಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಜಾಲತಾಣದಲ್ಲಿ ಇರುವ ತಾಂತ್ರಿಕ ದೋಷಗಳ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ತಾಂತ್ರಿಕ ದೋಷದಿಂದ ರಿಟರ್ನ್‌ ಸಲ್ಲಿಕೆಯಲ್ಲಿ ವಿಳಂಬವಾಗುತ್ತಿದೆ ಎಂದು ವರ್ತಕರ ಸಮುದಾಯ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಹೀಗಾಗಿ ಜಿಎಸ್‌ಟಿಎನ್‌ ಸಿದ್ಧಪಡಿಸಿರುವ ಇನ್ಫೊಸಿಸ್ ಸಂಸ್ಥೆಯು, ಸಮಸ್ಯೆಗಳನ್ನು ಆದಷ್ಟೂ ಬೇಗ ಬಗೆಹರಿಸಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತಜ್ಞರು ಮತ್ತು ಎಂಜಿನಿಯರ್‌ಗಳನ್ನು ವಿವಿಧ ರಾಜ್ಯಗಳಿಗೆ ಕಳಿಸಿದೆ.

ತಾಂತ್ರಿಕ ದೋಷಗಳನ್ನು ಶೀಘ್ರವೇ ಬಗೆಹರಿಸುವಂತೆ ಜಿಎಸ್‌ಟಿಎನ್‌ ಸಮಸ್ಯೆಗಳ ನಿವಾರಣೆಗೆ ರಚಿಸಿರುವ ಸಚಿವರ ತಂಡವು ಅಕ್ಟೋಬರ್ 28ರಂದು ನಡೆದ ಸಭೆಯಲ್ಲಿ ಇನ್ಫೊಸಿಸ್‌ಗೆ ಸೂಚನೆ ನೀಡಿತ್ತು.

ಇನ್ಫೊಸಿಸ್ ಸ್ಪಷ್ಟನೆ: ‘ಜಿಎಸ್‌ಟಿ ಒಂದು ಸಂಕೀರ್ಣ ವ್ಯವಸ್ಥೆಯಾಗಿದೆ.  ಸರ್ಕಾರ ದಿಢೀರನೇ ನಿಯಮಗಳಲ್ಲಿ ಬದಲಾವಣೆಗಳನ್ನು ತರುತ್ತಿದೆ. ಅದಕ್ಕೆ ಅನುಗುಣವಾಗಿ ಜಾಲತಾಣ ಸಿದ್ಧಪಡಿಸಲು ಸಮಯ ಬೇಕಾಗುತ್ತದೆ. ಅದರಿಂದಾಗಿಯೇ ಕೆಲವು ಸಮಸ್ಯೆಗಳು ಉದ್ಭವಿಸುತ್ತಿವೆ. ತಾಂತ್ರಿಕ ದೋಷದ ಬಗ್ಗೆ ಎಲ್ಲರೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಇನ್ಫೊಸಿಸ್ ಸಂಸ್ಥೆಯು ಪ್ರತಿಕ್ರಿಯಿಸಿದೆ.

‘ನಮ್ಮಲ್ಲಿರುವ ಅತ್ಯಂತ ಪರಿಣತ ಎಂಜಿನಿಯರ್‌ಗಳು ಜಿಎಸ್‌ಟಿಎನ್‌ ತಂಡದ ಕೆಲಸ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲು ಗಮನ ನೀಡುತ್ತಿದ್ದಾರೆ’ ಎಂದು ತಿಳಿಸಿದೆ.

ನಿಯಮದಲ್ಲಿ ಬದಲಾವಣೆಯಿಂದ ಸಮಸ್ಯೆ
‘ಜಿಎಸ್‌ಟಿ ಒಂದು ಸಂಕೀರ್ಣ ವ್ಯವಸ್ಥೆಯಾಗಿದೆ.  ಸರ್ಕಾರ ದಿಢೀರನೇ ನಿಯಮಗಳಲ್ಲಿ ಬದಲಾವಣೆಗಳನ್ನು ತರುತ್ತಿದೆ. ಅದಕ್ಕೆ ಅನುಗುಣವಾಗಿ ಜಾಲತಾಣ ಸಿದ್ಧಪಡಿಸಲು ಸಮಯ ಬೇಕಾಗುತ್ತದೆ. ಅದರಿಂದಾಗಿಯೇ ಕೆಲವು ಸಮಸ್ಯೆಗಳು ಉದ್ಭವಿಸುತ್ತಿವೆ. ತಾಂತ್ರಿಕ ದೋಷದ ಬಗ್ಗೆ ಎಲ್ಲರೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಇನ್ಫೊಸಿಸ್ ಸಂಸ್ಥೆಯು ಪ್ರತಿಕ್ರಿಯಿಸಿದೆ.

‘ನಮ್ಮಲ್ಲಿರುವ ಅತ್ಯಂತ ಪರಿಣತ ಎಂಜಿನಿಯರ್‌ಗಳು ಜಿಎಸ್‌ಟಿಎನ್‌ ತಂಡದ ಕೆಲಸ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲು ಗಮನ ನೀಡುತ್ತಿದ್ದಾರೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT