ಚೀನಾ: ರಾಷ್ಟ್ರಗೀತೆಗೆ ಅಗೌರವ ತೋರಿದರೆ ಮೂರು ವರ್ಷ ಜೈಲು

ಬೀಜಿಂಗ್: ರಾಷ್ಟ್ರಗೀತೆಗೆ ಅಗೌರವ ತೋರಿದರೆ ಮೂರು ವರ್ಷದ ವರೆಗೆ ಶಿಕ್ಷೆಗೆ ವಿಧಿಸುವ ಹೊಸ ಕಾನೂನನ್ನು ಚೀನಾ ಶನಿವಾರ ಜಾರಿಗೆ ತಂದಿದೆ. ವಿಶೇಷ ಆಡಳಿತ ಹೊಂದಿರುವ ಹಾಂಕಾಂಗ್ ಮತ್ತು ಮಕಾವ್‌ನ ಪ್ರಾಂತಗಳಿಗೂ ಈ ಕಾಯಿದೆ ಅನ್ವಯವಾಗಲಿದೆ.
ದೇಶದ ಅಪರಾಧ ಕಾನೂನುಗಳಿಗೆ ತಿದ್ದುಪಡಿ ತರುವ ಆಡಳಿತ ಕಮ್ಯೂನಿಸ್ಟ್ ಪಕ್ಷದ ನಿರ್ಧಾರವನ್ನು ಚೀನಾದ ಸಂಸತ್ತು ಅಂಗೀಕರಿಸಿದೆ.
ಹಾಂಕಾಂಗ್ ಮತ್ತು ಮಕಾವ್‌ನ ವಿಶೇಷ ಆಡಳಿತವಿರುವ ಪ್ರಾಂತ್ಯಗಳಿಗೂ ಈ ಕಾನೂನು ಅನ್ವಯವಾಗಲಿದೆ ಎನ್ನುವ ಮಸೂದೆಗೂ ಸಂಸತ್ತು ಅನುಮೋದನೆ ನೀಡಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಕ್ಸಿನ್‌ಹುವಾ ವರದಿ ಮಾಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.