ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಿಂದ ನಾಲ್ಕನೇ ಹಂತದ ಹುಲಿ ಗಣತಿ

Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹುಣಸೂರು (ಮೈಸೂರು ಜಿಲ್ಲೆ): ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ನ. 15ರಿಂದ 60 ದಿನಗಳ ಕಾಲ 4ನೇ ಹಂತದ ಹುಲಿ ಗಣತಿ ನಡೆಯಲಿದೆ. ಇದಕ್ಕಾಗಿ ಅರಣ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಿಬ್ಬಂದಿಗೆ ಒಂದು ದಿನದ ತರಬೇತಿ ನೀಡಲಾಗಿದೆ.

‘ರಾಷ್ಟ್ರೀಯ ಹುಲಿ ಯೋಜನೆ ಅನುಸಾರ ಪ್ರತಿ ವರ್ಷವೂ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಗಣತಿ ನಡೆಯಲಿದೆ. ಈ ಸಾಲಿನಲ್ಲಿ ಕ್ಯಾಮೆರಾ ಆಧರಿಸಿ ಗಣತಿ ನಡೆಸಲಾಗುವುದು’ ಎಂದು ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ಮಧುಸೂದನ್‌ ತಿಳಿಸಿದರು.

‘ನಾಗರಹೊಳೆಯ 648 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ 8 ವಲಯಗಳಿದ್ದು, ಒಟ್ಟು 201 ಸ್ಥಳ ಗುರುತಿಸಲಾಗಿದೆ. ಪ್ರತಿ 2 ಕಿ.ಮೀಗೆ ವಿರುದ್ಧ ದಿಕ್ಕಿನಲ್ಲಿ ಎರಡು ಕ್ಯಾಮೆರಾ ಅಳವಡಿಸಲಾಗುವುದು. ಒಟ್ಟು 402 ಕ್ಯಾಮೆರಾ ಬಳಸಿಕೊಳ್ಳಲಾಗುವುದು. ಇಲಾಖೆಯ 60 ಸಿಬ್ಬಂದಿ ಭಾಗವಹಿಸಲಿದ್ದು, ಅನುಸರಿಸಬೇಕಿರುವ ಕ್ರಮ ಹಾಗೂ ಕ್ಯಾಮೆರಾ ಬಳಸುವ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದು ಹೇಳಿದರು.

‘ಮಾಹಿತಿ ಕ್ರೋಡೀಕರಿಸುವ ಬಗ್ಗೆ ಕಂಪ್ಯೂಟರ್‌ ಆಪರೇಟರ್‌ಗಳಿಗೆ ತರಬೇತಿ ನೀಡಲಾಗಿದೆ. ಮಾಹಿತಿ ಸಂಗ್ರಹಕ್ಕೆ ಬೇಕಾದ ಎಲ್ಲ ಸಾಫ್ಟ್ ವೇರ್‌ಗಳು ಇಲಾಖೆಯಲ್ಲಿ ಲಭ್ಯವಿವೆ’ ಎಂದರು.

2015–16ನೇ ಸಾಲಿನ ಗಣತಿಯಲ್ಲಿ ನಾಗರಹೊಳೆಯಲ್ಲಿ 92 ಹುಲಿಗಳು ಪತ್ತೆಯಾಗಿದ್ದವು. ಈ ಅರಣ್ಯ ಹುಲಿ ಸಂತತಿ ವೃದ್ಧಿಗೆ ಸೂಕ್ತ ಪ್ರದೇಶವಾಗಿದ್ದು, ಈ ಬಾರಿ ಹೆಚ್ಚು ವ್ಯಾಘ್ರಗಳು ಪತ್ತೆಯಾಗುವ ಸಾಧ್ಯತೆಗಳಿವೆ. ಗಣತಿಗೆ ನವೆಂಬರ್‌ನಿಂದ ಜನವರಿ ಅಂತ್ಯದವರೆಗೆ ಸೂಕ್ತ ಸಮಯವಾಗಿದೆ. ರಾಜ್ಯದ ಎಲ್ಲ ಹುಲಿ ಸಂರಕ್ಷಿತಾರಣ್ಯದಲ್ಲಿ ಏಕಕಾಲಕ್ಕೆ ಗಣತಿ ಆರಂಭವಾಗಲಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT