ಶನಿವಾರ, ಫೆಬ್ರವರಿ 27, 2021
31 °C

68 ಚುನಾವಣಾ ಕ್ಷೇತ್ರಗಳು, 337 ಅಭ್ಯರ್ಥಿಗಳು; ಮತಗಟ್ಟೆಯತ್ತ ಹಿಮಾಚಲಪ್ರದೇಶದ ಮತದಾರರು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

68 ಚುನಾವಣಾ ಕ್ಷೇತ್ರಗಳು, 337 ಅಭ್ಯರ್ಥಿಗಳು; ಮತಗಟ್ಟೆಯತ್ತ ಹಿಮಾಚಲಪ್ರದೇಶದ ಮತದಾರರು

ಶಿಮ್ಲಾ: ಗುಡ್ಡಗಾಡು ರಾಜ್ಯ ಹಿಮಾಚಲಪ್ರದೇಶದ ವಿಧಾನಸಭೆಗೆ ಗುರುವಾರ ಬೆಳಗ್ಗೆ ಮತದಾನ ಆರಂಭವಾಗಿದೆ.  68 ಚುನಾವಣಾ ಕ್ಷೇತ್ರಗಳಲ್ಲಿ 337 ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಹಣಾಹಣಿ ನಡೆಯಲಿದೆ.

ಒಟ್ಟು 50.25 ಲಕ್ಷ ಮತದಾರರಿರುವ ಈ ರಾಜ್ಯದಲ್ಲಿ 19 ಲಕ್ಷ ಮಹಿಳಾ ಮತದಾರರು ಮತ್ತು 14 ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಇದ್ದಾರೆ. ಕಣಕ್ಕಿಳಿದಿರುವ 337 ಅಭ್ಯರ್ಥಿಗಳಲ್ಲಿ 19 ಮಂದಿ ಮಹಿಳೆಯರು.

 ಬಿಎಸ್‌ಪಿ 42, ಸಿಪಿಎಂ 14 ಮತ್ತು ಸ್ವಾಭಿಮಾನ ಪಾರ್ಟಿ ಮತ್ತು ಎಲ್‌ಜಿಪಿ ತಲಾ ಆರು ಮತ್ತು ಸಿಪಿಐ 3 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.

ಕ್ಷಣ ಕ್ಷಣದ ಸುದ್ದಿ

ಬೆಳಗ್ಗೆ 11.46: ದೇಶದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ ಅವರು ಕಲ್ಪಾ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

11.02: ಬಿಲಾಸ್‍‌ಪುರ್‍‍ನಲ್ಲಿ ಮತ ಚಲಾಯಿಸಿದ ಜೆಪಿ ನಡ್ಡಾ

11.10: ಶಿಮ್ಲಾದ ಫಗು, ಹಮೀರ್ ಪುರದಲ್ಲಿ ಮತದಾನ
11.05: ಬುಡಕಟ್ಟು ಜನಾಂಗದವರ ಜಿಲ್ಲೆಯಾದ ಲಹೌಲ್-ಸ್ಪಿಸಿಯಲ್ಲಿ ಬೆಳಗ್ಗೆ 10 ಗಂಟೆವರೆಗೆ ಶೇ. 9ರಷ್ಟು ಮತದಾನ
10.30:  ಮರು ಚುನಾವಣೆ ನಡೆಯುತ್ತಿರುವ ಹಮೀರ್‍‍ಪುರ್ ನ ಸುಜಾನ್‍ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಮತಯಂತ್ರ ಕಾರ್ಯನಿರ್ವಹಿಸದೇ ಇದ್ದ ಕಾರಣ ಮತದಾನ ಕೆಲ ಕಾಲ ಸ್ಥಗಿತ
10.30 : 10 ಗಂಟೆ ವರೆಗೆ ಹಿಮಾಚಲ ಪ್ರದೇಶದಲ್ಲಿ ಶೇ.13.72ರಷ್ಟು ಮತದಾನ

10.02: ಮುಖ್ಯಮಂತ್ರಿ ವೀರ್‍ಭದ್ರ ಸಿಂಗ್ ಮತ್ತು ಅವರ ಕುಟುಂಬ, ಬಿಜೆಪಿ ಸಂಸದ ಅನುರಾಗ್ ಠಾಕೂರ್  ರಾಮಪುರ್ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾವಣೆ

9.49: ಕಾಂಗ್ರೆಸ್ ಬಹುಮತ ಸಾಧಿಸುತ್ತದೆ ಎಂಬ ಆತ್ಮ ವಿಶ್ವಾಸವಿದೆ: ಹಿಮಾಚಲ ಮುಖ್ಯಮಂತ್ರಿ ವೀರ್‍‍ಭದ್ರ  ಸಿಂಗ್
9.38:  ರಾಮ್‍‌ಪುರ್ ವಿಧಾನಸಭಾ ಕ್ಷೇತ್ರದ ರಚೋಲಿಯಲ್ಲಿ ಮತದಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿರುವ ಮತದಾರರು
9.28: ಹಿಮಾಚಲ ಪ್ರದೇಶದಲ್ಲಿ ಲೂಟಿ ಮಾಡಿದ್ದ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲು ಇಲ್ಲಿನ ಜನರು ಸಿದ್ಧರಾಗಿದ್ದಾರೆ,ಪ್ರೇಮ್ ಕುಮಾರ್ ಧುಮಾಲ್‍ನಂತ ಹಿರಿಯ ನಾಯಕರೊಬ್ಬರ ಅವಶ್ಯಕತೆ ಇಲ್ಲಿದೆ ಎಂದು ಹಮೀರ್‍‍ಪುರ್‍ನ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

9.10: 50ಕ್ಕಿಂತ ಹೆಚ್ಚು ಸೀಟುಗಳ ಮೇಲೆ ನಾವು ಗುರಿಯಿಟ್ಟಿದ್ದೆವು. ಆದರೆ ಈಗ ಎಲ್ಲ ಕಡೆಯಿಂದ ಬೆಂಬಲ ದೊರೆಯುತ್ತಿದ್ದು 60ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದು ಬಿಜೆಪಿಯ ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ ಪ್ರೇಮ್ ಕುಮಾರ್ ಧುಮಾಲ್.
8.00: ಮತದಾನ ಆರಂಭ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.