ಶುಕ್ರವಾರ, ಮಾರ್ಚ್ 5, 2021
17 °C

ಧಾರವಾಡದ ಸುತ್ತ ಚಿತ್ರೀಕರಿಸಿದ ‘ಕಾಲೇಜ್‌ ಮಾಫಿಯಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡದ ಸುತ್ತ ಚಿತ್ರೀಕರಿಸಿದ ‘ಕಾಲೇಜ್‌ ಮಾಫಿಯಾ’

ಅಲ್ಲಿದ್ದದ್ದು ಒಂದೇ ತಂಡ, ಒಬ್ಬರೇ ನಿರ್ದೇಶಕರು. ಆದರೆ ಬಿಡುಗಡೆಯಾದ ಸಿ.ಡಿ. ಮಾತ್ರ ಎರಡು ಚಿತ್ರಗಳದ್ದು!

ಎಂ.ರಂಗನಾಥ್‌ ಅವರು ಕಥೆ, ಚಿತ್ರಕಥೆ, ಮತ್ತು ನಿರ್ದೇಶನ ಮಾಡಿರುವ ಎರಡು ಸಿನಿಮಾಗಳ ಧ್ವನಿಸುರಳಿಯನ್ನು ಒಂದೇ ಕಾರ್ಯಕ್ರಮದಲ್ಲಿ ಮಾಡಲಾಯಿತು. ಆ ಸಿನಿಮಾಗಳ ಹೆಸರು ‘ಕಾಲೇಜ್‌ ಮಾಫಿಯಾ’ ಮತ್ತು ‘ಧರ್ಮವೀರ’.

‘ಕಾಲೇಜು ವಿದ್ಯಾರ್ಥಿಗಳಿಗೆ ಅಂತಲೇ ಮಾಡಿದ ಸಿನಿಮಾ ಕಾಲೇಜ್  ಮಾಫಿಯಾ. ಕಾಲೇಜುಗಳಲ್ಲಿ ಡ್ರಗ್ಸ್‌ ಮಾಫಿಯಾ ಹೇಗಿರುತ್ತದೆ, ಇಂದಿನ ಯುವ ಜನತೆಯನ್ನು ಅದು ಹೇಗೆ ಬಲಿ ತೆಗೆದುಕೊಳ್ಳುತ್ತಿದೆ ಎಂಬುದನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಜತೆಗೆ ಯುವ ಪೀಳಿಗೆಯೇ ಎಚ್ಚೆತ್ತುಕೊಂಡರೆ ಆ ಮಾಫಿಯಾವನ್ನು ಹೇಗೆ ಮಟ್ಟಹಾಕಬಹುದು ಎಂಬುದನ್ನೂ ತೋರಿಸಿದ್ದೇವೆ’ ಎಂದರು ರಂಗನಾಥ್‌.

ಈ ಚಿತ್ರಕ್ಕೆ ಹಣ ಹೂಡಿರುವ ಶಶಿಧರ ಪಾಟೀಲ ಮಾತನಾಡಿ‘ಇದು ಉತ್ತರಪ್ರದೇಶದ ಕಾಲೇಜೊಂದರಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿ ಮಾಡಿದ ಸಿನಿಮಾ. ಧಾರವಾಡ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಿದ್ದೇವೆ’ ಎಂದು ವಿವರಣೆ ನೀಡಿದರು. ಈ ಚಿತ್ರಕ್ಕೆ ನಿರ್ಮಾಪಕರ ಮಗ ನಿತೇಶ್‌ ನಾಯಕನಾದರೆ ನಿರ್ದೇಶಕರ ಮಗಳು ಸುಷ್ಮಿತಾ ನಾಯಕಿ. ಸಚಿನ್‌ ಎಂಬ ಹುಡುಗ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೊಂದು ಚಿತ್ರ ‘ಧರ್ಮವೀರ’ಕ್ಕೆ ಹಣ ಹೂಡಿರುವ ಡಿ. ಕಲ್ಮೇಶ್‌ ಹಾವೇರಿ ಪೇಟ್‌ ಅವರೇ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ‘ನಿರ್ದೇಶಕರ ಒತ್ತಾಯದ ಮೇರೆಗೆ ಅಭಿನಯವನ್ನು ಕಲಿತುಕೊಂಡು ಈ ಚಿತ್ರದಲ್ಲಿ ನಟಿಸಿದ್ದೇನೆ. ಈಗಾಗಲೇ ತೊಂಬತ್ತರಷ್ಟು ಚಿತ್ರೀಕರಣ ಮುಗಿದಿದೆ’ ಎಂದು ಅವರು ವಿವರಣೆ ನೀಡಿದರು.

‘ಇದು ಕೌಟುಂಬಿಕ ಚಿತ್ರಕಥೆ ಇರುವ ಸಿನಿಮಾ. ಊರಲ್ಲಿ ಎಲ್ಲರಿಗೂ ಸಹಾಯ ಮಾಡುವುದರ ಮೂಲಕ ಹೆಸರು ಗಳಿಸಿದ ವ್ಯಕ್ತಿಯೊಬ್ಬ ಮನೆಯಲ್ಲಿ ಹೇಗೆ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದು ಇದರ ಕಥಾವಸ್ತು’ ಎಂಬುದು ನಿರ್ದೇಶಕ ರಂಗನಾಥ್‌ ವಿವರಣೆ.

ಸಿಂಧು ರಾವ್‌ ಮತ್ತು ರಂಜಿತಾ ರಾವ್‌ ನಾಯಕಿಯರಾಗಿ ನಟಿಸಿದ್ದಾರೆ. ‘ನಾನು ಈ ಚಿತ್ರದಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದೇನೆ. ನನ್ನೊಳಗಿನ ಪ್ರತಿಭೆಯನ್ನು ನಿರ್ದೇಶಕರು ಹೊರಹಾಕಿದ್ದಾರೆ’ ಎಂದರು ಸಿಂಧು.

ಎರಡೂ ಚಿತ್ರಗಳಿಗೆ ವಿನು ಸಂಗೀತ ಸಂಯೋಜನೆ ಮಾಡಿದ್ದಾರೆ. ಜಗ್ಗು ಶಿರಸಿ ಹಾಡುಗಳನ್ನು ಬರೆದಿದ್ದಾರೆ. ಗುರುದತ್‌ ಮುಸುರಿ ಛಾಯಾಗ್ರಹಣ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.