ಬುಧವಾರ, ಮಾರ್ಚ್ 3, 2021
28 °C

ಹಿಮಾಚಲ: ಮಹಿಳೆಯರಿಂದ ಹೆಚ್ಚು ಮತದಾನ

ಪಿಟಿಐ Updated:

ಅಕ್ಷರ ಗಾತ್ರ : | |

ಹಿಮಾಚಲ: ಮಹಿಳೆಯರಿಂದ ಹೆಚ್ಚು ಮತದಾನ

ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.

ರಾಜ್ಯದ ಮತದಾರರ ಪಟ್ಟಿಯಲ್ಲಿ ಪುರುಷ ಮತದಾರರ ಸಂಖ್ಯೆ ಮಹಿಳೆಯರಿಗಿಂತ 74,200ದಷ್ಟು ಹೆಚ್ಚಿದೆ.

68 ಕ್ಷೇತ್ರಗಳ ಪೈಕಿ 48ರಲ್ಲಿ ಮಹಿಳೆಯರು ಮಾಡಿರುವ ಮತದಾನದ ಪ್ರಮಾಣ ಗಂಡಸರಿಗಿಂತ ಹೆಚ್ಚಿದೆ.

ಅತೀ ಹೆಚ್ಚು: ಕಾಂಗ್ರಾ ಜಿಲ್ಲೆಯಲ್ಲಿ ಅತೀ ಹೆಚ್ಚು ಮಹಿಳೆಯರು ಮತದಾನ ಮಾಡಿದ್ದಾರೆ. ಇಲ್ಲಿ 3.96 ಲಕ್ಷ ಪುರುಷರು ಮತದಾನ ಮಾಡಿದ್ದರೆ, 4.61 ಲಕ್ಷ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ, ಈ ಬಾರಿ ಹಿಮಾಚಲ ಪ್ರದೇಶದಲ್ಲಿ ದಾಖಲೆಯ ಶೇ 74.61ರಷ್ಟು ಮತದಾನವಾಗಿದೆ. 2012ರಲ್ಲಿ ಈ ಪ್ರಮಾಣ ಶೇ 73.51ರಷ್ಟಿತ್ತು.

*

ಅಂಕಿ– ಅಂಶ

ಮತದಾನ ಮಾಡಿದ ಮಹಿಳೆಯರು 19.10 ಲಕ್ಷ

ಮತದಾನ ಮಾಡಿದ ಪುರುಷರು 18.11 ಲಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.