ಶುಕ್ರವಾರ, ಫೆಬ್ರವರಿ 26, 2021
27 °C

’ರಾಮ್‌ ರಹೀಂಗೆ ವಿಶೇಷ ಸೌಲಭ್ಯ ನೀಡಿಲ್ಲ’

ಪಿಟಿಐ Updated:

ಅಕ್ಷರ ಗಾತ್ರ : | |

’ರಾಮ್‌ ರಹೀಂಗೆ ವಿಶೇಷ ಸೌಲಭ್ಯ ನೀಡಿಲ್ಲ’

ಚಂಡೀಗಡ: ‘ಅತ್ಯಾಚಾರ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಒಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್‍ಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಒದಗಿಸಿಲ್ಲ’ ಎಂದು ಹರಿಯಾಣ ಡಿಜಿಪಿ (ಕಾರಾಗೃಹ) ಕೆ.ಪಿ.ಸಿಂಗ್‌ ಹೇಳಿದ್ದಾರೆ.

‘ಗುರ್ಮೀತ್‌ನನ್ನು ಇರಿಸಲಾಗಿರುವ ರೋಹ್ಟಕ್‌ನ ಸುನರಿಯಾ ಜೈಲಿಗೆ ನಮ್ಮ ಅಧಿಕಾರಿಗಳು ಪ್ರತಿ ವಾರ ಡಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ. ಆಗ ಅಂತಹ ವಿಶೇಷ ಸೌಲಭ್ಯದ ಯಾವ ಅಂಶವೂ ಕಂಡುಬಂದಿಲ್ಲ. ಹೀಗಾಗಿ ಈ ಕುರಿತ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಅವರು ಹೇಳಿದ್ದಾರೆ.

ಜೈಲಿನಿಂದ ಹೊರಬಂದಿರುವ ಕೈದಿಯೊಬ್ಬ ಇಂತಹ ಆರೋಪಗಳನ್ನು ಮಾಡಿರುವುದಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.