ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ನಿರ್ಮಿಸಿ

Last Updated 21 ನವೆಂಬರ್ 2017, 7:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರದ 8ನೇ ವಾರ್ಡ್‌ ವ್ಯಾಪ್ತಿಯ ಜಿ.ಎಸ್‌ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಚರಂಡಿಯನ್ನು ಅರ್ಧ ಮಾತ್ರ ನಿರ್ಮಾಣ ಮಾಡಲಾಗಿದೆ.ಇದರಿಂದಾಗಿ ಚರಂಡಿಯಲ್ಲಿ ನೀರು ಮಡುಗಟ್ಟಿ ನಿಂತು ಸ್ಥಳೀಯರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿದೆ.

ಈ ರಸ್ತೆಯಲ್ಲಿದ್ದ ಹಳೆಯ ಚರಂಡಿಯನ್ನು ಮುಚ್ಚಿ ಹಾಕಲಾಗಿದ್ದು ಇದರಿಂದ ಮಳೆ ಮತ್ತು ತ್ಯಾಜ್ಯ ನೀರು ಹರಿದು ಹೋಗಲು ದಾರಿ ಇಲ್ಲದಂತಾಗಿದೆ. ಮಡುಗಟ್ಟಿ ನಿಂತ ಚರಡಿಯೊಳಗೆ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಇದರಿಂದ ಸ್ಥಳೀಯರಿಗೆ ದುರ್ವಾಸನೆ ಜತೆಗೆ ಸೊಳ್ಳೆ ಕಾಟ ಸಹ ತೊಂದರೆ ನೀಡುತ್ತಿದೆ. ನಗರಸಭೆ ಅಧಿಕಾರಿಗಳು ಇನ್ನಾದರೂ ಇತ್ತ ಗಮನ ಹರಿಸಿ ಚರಂಡಿ ನಿರ್ಮಿಸಲು ಕ್ರಮಕೈಗೊಳ್ಳಬೇಕು.
ಶ್ರೀನಿವಾಸ್‌, 8ನೇ ವಾರ್ಡ್‌ ನಿವಾಸಿ

ತ್ಯಾಜ್ಯ ವಿಲೇವಾರಿ ಮಾಡಿಸಿ
ಚಿಕ್ಕಬಳ್ಳಾಪುರದ ಹಳೆ ಅಂಚೆ ಕಚೇರಿ (ಓಪಿಒ) ರಸ್ತೆಯಲ್ಲಿ ರಸ್ತೆ ಬದಿಯಲ್ಲಿ ಸುರಿದ ತ್ಯಾಜ್ಯವನ್ನು ಪೌರ ಕಾರ್ಮಿಕರು ವಿಲೇವಾರಿ ಮಾಡಿಲ್ಲ. ಇದರಿಂದಾಗಿ ತ್ಯಾಜ್ಯದ ರಾಶಿ ರಸ್ತೆಯನ್ನು ಆವರಿಸಿಕೊಳ್ಳುತ್ತ ಅಸಹ್ಯಕರ ವಾತಾವರಣ ಸೃಷ್ಟಿಸುತ್ತಿದೆ.

ಸ್ಥಳೀಯರು, ವರ್ತಕರು ಇಲ್ಲಿ ತಂದು ಸುರಿಯುವ ತ್ಯಾಜ್ಯವನ್ನು ನಗರಸಭೆಯವರು ನಿಯಮಿತವಾಗಿ ವಿಲೇವಾರಿ ಮಾಡುತ್ತಿಲ್ಲ. ಅನೇಕ ಬಾರಿ ಇಲ್ಲಿ ಕಸದ ರಾಶಿಯನ್ನು ನಾಯಿಗಳು, ಬೀದಿ ದನಗಳು ಆಹಾರಕ್ಕಾಗಿ ಎಲ್ಲೆಂದರಲ್ಲಿ ಹರಡುತ್ತವೆ. ಆಗೆಲ್ಲ ರಸ್ತೆಯ ಸ್ಥಿತಿ ಅಯೋಮಯವಾಗಿರುತ್ತದೆ. ನಗರಸಭೆಯವರು ಇನ್ನಾದರೂ ಇತ್ತ ಗಮನ ಹರಿಸಲಿ.
ಸಲ್ಮಾನ್‌,
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT