7

ವೈರಲ್‌ ವಿಡಿಯೊ: ಚುಡಾಯಿಸಿದ ಬಳಿಕ ಗಗನ ಸಖಿಯ ಕಾಲು ಮುಟ್ಟಿ ಕ್ಷಮೆ ಕೋರಿದ ಯುವಕ

Published:
Updated:
ವೈರಲ್‌ ವಿಡಿಯೊ: ಚುಡಾಯಿಸಿದ ಬಳಿಕ ಗಗನ ಸಖಿಯ ಕಾಲು ಮುಟ್ಟಿ ಕ್ಷಮೆ ಕೋರಿದ ಯುವಕ

ಹೈದರಾಬಾದ್‌: ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕನೊಬ್ಬ ಗಗನ ಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಳಿಕ ಆಕೆಯ ಪಾದ ಮುಟ್ಟಿ ಕ್ಷಮೆ ಕೋರಿರುವ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಳೆದ ಭಾನುವಾರ ಈ ಘಟನೆ ನಡೆದಿದೆ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಂಡಿಗೊ ಏರ್‌ಲೈನ್ಸ್‌ ಸಂಸ್ಥೆಯ ಗಗನ ಸಖಿಯೊಂದಿಗೆ ಭರತ್ ಮತ್ತು ಕಲ್ಯಾಣ್‌ ಎಂಬ  ಯುವಕರು ಅನುಚಿತವಾಗಿ ವರ್ತಿಸಿದ್ದಾರೆ. ಕೂಡಲೇ ಆ ಯುವತಿ ಗಸ್ತಿನಲ್ಲಿದ್ದ  ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಿಮಾನ ನಿಲ್ದಾಣದ  ಆವರಣದಲ್ಲಿನ ಪೊಲೀಸ್‌ ಠಾಣೆಗೆ ಆರೋಪಿತರನ್ನು ಕರೆತಂದಿದ್ದಾರೆ. ಮದ್ಯ ಸೇವಿಸಿದ್ದರಿಂದ ಅಮಲಿನಲ್ಲಿ ಈ ರೀತಿ ನಡೆದುಕೊಂಡಿದ್ದೇವೆ ಎಂದು ಹೇಳಿ ಆ ಗಗನ ಸಖಿಯ ಕ್ಷಮೆ ಕೋರಿದ್ದಾರೆ.

ಕೊನೆಗೆ ಪೊಲೀಸರ ಎದುರೇ ಒಬ್ಬ ಯುವಕ ಗಗನ ಸಖಿಯ ಕಾಲು ಮುಟ್ಟಿ ಕ್ಷಮೆ ಕೋರಿದ್ದಾನೆ.  ಈ ಘಟನೆ ಕುರಿತಂತೆ ಗಗನ ಸಖಿ ದೂರು ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry