7

ಪತ್ನಿಯ ಎದುರೇ ಪ್ರಿಯಕರನ ಕೊಂದ ಪತಿ

Published:
Updated:

ಯಾದಗಿರಿ: ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆಕೆಯ ಎದುರೇ ಬೆತ್ತಲುಗೊಳಿಸಿ ಮರಕ್ಕೆ ಕಟ್ಟಿಹಾಕಿ ಬಡಿಗೆಯಿಂದ ಹೊಡೆದು ಗುರುವಾರ ತಡರಾತ್ರಿ ತಾಲ್ಲೂಕಿನ ಕೆ.ಹೊಸಳ್ಳಿಯಲ್ಲಿ ಕೊಲೆ ಮಾಡಲಾಗಿದೆ.

ಇಸಾಕ್ (35) ಕೊಲೆಯಾಗಿದ್ದು, ಆರೋಪಿ ಏಸುಮಿತ್ರ ಗುರುಮಠಕಲ್ ಠಾಣೆಯ ಪೊಲೀಸರಿಗೆ ಶರಣಾಗಿದ್ದಾನೆ. ‘ಇಸಾಕ್‌, ಏಸುಮಿತ್ರನ ಹೆಂಡತಿಯೊಂದಿಗೆ ಮೂರು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದನು.ಈ ಕುರಿತು ಏಸುಮಿತ್ರ ಹೆಂಡತಿ ಹಾಗೂ ಪ್ರಿಯಕರನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದನು.

ಗುರುವಾರ ರಾತ್ರಿ ಮತ್ತೆ ಇಸಾಕ್ ಹೆಂಡತಿಯೊಂದಿಗೆ ಕಾಣಿಸಿಕೊಂಡಾಗ ಏಸುಮಿತ್ರನು ಹೆಂಡತಿಯನ್ನು ಒಂದು ಮರಕ್ಕೆ, ಇಸಾಕ್‌ನನ್ನು ಇನ್ನೊಂದು ಮರಕ್ಕೆ ಕಟ್ಟಿಹಾಕಿ ಹೊಡೆದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಹೆಂಡತಿಯ ಎದುರೇ ಪ್ರಿಯಕರನ ಕೊಲೆ ನಡೆದಿರುವ ದೃಶ್ಯ ವಾಟ್ಸ್ಆ್ಯಪ್‌ಗಳಲ್ಲಿ ಶುಕ್ರವಾರ ಹರಿದಾಡಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry