ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಒಸಿ: ಸಾಮರ್ಥ್ಯ ವೃದ್ಧಿಗೆ ₹ 1.43 ಲಕ್ಷ ಕೋಟಿ ಹೂಡಿಕೆ

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತಿದೊಡ್ಡ ತೈಲ ಸಂಸ್ಥೆ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ತನ್ನ ತೈಲಾಗಾರ ಸಾಮರ್ಥ್ಯ ವೃದ್ಧಿಸಲು ₹ 1.43 ಲಕ್ಷ ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ.

2030ರ ಒಳಗೆ ತೈಲಾಗಾರ ಸಾಮರ್ಥ್ಯವನ್ನು 15 ಕೋಟಿ ಟನ್‌ಗಳಿಗೆ ಹೆಚ್ಚಿಸಲು ಹಾಗೂ ಪೆಟ್ರೋಕೆಮಿಕಲ್‌ ಉತ್ಪಾದನೆಗೆ ಆದ್ಯತೆ ನೀಡಲು ಈ ಹೂಡಿಕೆ ಮಾಡುವುದಾಗಿ ತಿಳಿಸಿದೆ.

‘ಯುರೊ 6 ಮಾಲಿನ್ಯ ತಡೆ ಮಾನದಂಡ ಇರುವ ಪೆಟ್ರೋಲ್‌ ಮತ್ತು ಡಿಸೆಲ್‌ ಉತ್ಪಾದನೆ ಮಾಡಲು ತೈಲಾಗಾರಗಳನ್ನು ಮೇಲ್ದರ್ಜೆಗೆ ಏರಿಸಬೇಕಿದೆ. ಇದಕ್ಕಾಗಿ ₹ 16,628 ಕೋಟಿ ಹೂಡಿಕೆ ಮಾಡಲಿದ್ದು, 2020ರ ವೇಳೆಗೆ ಹೂಡಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಕಂಪನಿಯ ನಿರ್ದೇಶಕ ಬಿ.ವಿ. ರಾಮ ಗೋಪಾಲ್ ತಿಳಿಸಿದ್ದಾರೆ.

‘ಪೆಟ್ರೋಕೆಮಿಕಲ್ ಯೋಜನೆಗೆ ₹ 15,600 ಕೋಟಿ ಹಾಗೂ ಹಾಲಿ ಇರುವ ತೈಲಾಗಾರಗಳ ಸಾಮರ್ಥ್ಯ ವೃದ್ಧಿಗೆ ₹ 74,600 ಕೋಟಿ ಹೂಡಿಕೆ ಮಾಡಲಾಗುವುದು. ₹ 36,500 ಕೋಟಿ ವೆಚ್ಚದ ಯೋಜನೆಗೆ ಕಂಪನಿ ಆಡಳಿತ ಮಂಡಳಿ ಒಪ್ಪಿಗೆ ದೊರೆಯಬೇಕಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT