5

ವಿಜಯಪುರದ ರಸ್ತೆ ಕಾಮಗಾರಿ ವೀಕ್ಷಣೆ, ಗುಣಮಟ್ಟ ಕಾಪಾಡಿ: ಅಮರನಾಥ

Published:
Updated:
ವಿಜಯಪುರದ ರಸ್ತೆ ಕಾಮಗಾರಿ ವೀಕ್ಷಣೆ, ಗುಣಮಟ್ಟ ಕಾಪಾಡಿ: ಅಮರನಾಥ

ವಿಜಯಪುರ: ಇಲ್ಲಿನ 10 ನೇ ವಾರ್ಡಿನ ಮಾಯಾ ಆಂಗ್ಲಶಾಲೆಯ ಮುಂಭಾಗದಲ್ಲಿ 14 ನೇ ಹಣಕಾಸು ಯೋಜನೆಯಡಿಯಲ್ಲಿ  ₹ 24 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ  ಕಾಮಗಾರಿಯನ್ನು ಪುರಸಭೆ ಮುಖ್ಯಾಧಿಕಾರಿ ಕೆ.ಜಿ.ಅಮರನಾಥ ವೀಕ್ಷಿಸಿದರು. 14 ನೇ ಹಣಕಾಸು ಯೋಜನೆ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಜನರು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಸಾರ್ವಜನಿಕ ಸ್ವತ್ತುಗಳನ್ನು ನಾಶ ಮಾಡುವುದಾಗಲಿ, ಅವುಗಳನ್ನು ಅತಿಕ್ರಮಣ ಮಾಡುವುದಾಗಲಿ ಆಗಬಾರದು ಎಂದರು. ರಸ್ತೆ ಮತ್ತಿತರ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಮುಖಂಡ ಸಂಪತ್ ಕುಮಾರ್ ಮಾತನಾಡಿ, ಸ್ಥಳೀಯ ನಾಗರಿಕರು ರಸ್ತೆಗಳು, ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಿಕೊಳ್ಳಬೇಕು ಎಂದರು.ಇವುಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು. ಎಲ್ಲೆಂದರಲ್ಲಿ ಕಸವನ್ನು ಹಾಕಬಾರದು ಎಂದು ಅವರು ಎಚ್ಚರಿಸಿದರು.

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾಮಗಾರಿ ನಡೆಯುವುದಾಗಿ ಸ್ಥಳೀಯ ನಾಗರಿಕರು ಗಮನಹರಿಸುವುದರ ಜೊತೆಗೆ ಸಂಬಂಧಪಟ್ಟ ಎಂಜಿನಿಯರ್‌ ಗಳು ಸ್ಥಳದಲ್ಲಿರಬೇಕು ಎಂದು ಎಚ್ಚರಿಸಿದರು. ಕಾಮಗಾರಿಗಳನ್ನು ವೀಕ್ಷಣೆ ಮಾಡಬೇಕು ಎಂದರು. ಗುತ್ತಿಗೆದಾರ ವೆಂಕಟೇಶ್ ಇದ್ದರು.

* * 

ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ನಾಗರಿಕರ ಸಹಕಾರವಿದ್ದಾಗ ಮಾತ್ರ ಉತ್ತಮ ಅಭಿವೃದ್ಧಿ ಸಾಧ್ಯವಾಗುತ್ತದೆ

ಕೆ.ಜಿ.ಅಮರನಾಥ , ಪುರಸಭೆ ಮುಖ್ಯಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry