7

ವಿದ್ಯುತ್ ಪ್ರವಹಿಸಿ ಚಾಲಕ ಸಾವು

Published:
Updated:
ವಿದ್ಯುತ್ ಪ್ರವಹಿಸಿ ಚಾಲಕ ಸಾವು

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಬಳಿ ಬುಧವಾರ ರಾತ್ರಿ ಬಸ್ ರಿವರ್ಸ್ ತೆಗೆದು ಕೊಳ್ಳುವ ವೇಳೆ ವಿದ್ಯುತ್ ಪ್ರವಹಿಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಮನಗರ ತಾಲ್ಲೂಕಿನ ವಡೇರಹಳ್ಳಿ ನಿವಾಸಿ ಲೋಕೇಶ್ (34) ಮೃತರು. ಕೆಂಗಲ್ ಬಳಿಯ ತಿಮ್ಮಮ್ಮ ದಾಸೇಗೌಡ ಕಲ್ಯಾಣ ಮಂಟಪದಲ್ಲಿ ರಾತ್ರಿ ನಡೆಯಲಿರುವ ಮದುವೆ ಆರತಕ್ಷತೆಗೆ ಬಾನಂದೂರಿನಿಂದ ಜನರನ್ನು ಸಿ.ಎಂ‌. ಟ್ರಾವೆಲ್ಸ್‌ಗೆ ಸೇರಿದ ಬಸ್‌ನಲ್ಲಿ ಕರೆ ತರಲಾಗಿತ್ತು. ಜನರನ್ನು ಕಲ್ಯಾಣ ಮಂಟಪದ ಮುಂದೆ ಇಳಿಸಿ ಬಸ್‌ ಅನ್ನು ರಿವರ್ಸ್ ತೆಗೆದುಕೊಳ್ಳುವ ವೇಳೆ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ವಿದ್ಯುತ್ ತಂತಿ ತುಂಡಾಗಿ ಬಸ್ ಮೇಲೆ ಬಿದ್ದಿದೆ. ವಿದ್ಯುತ್ ಪ್ರವಹಿಸಿ ಲೋಕೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry