ಶುಕ್ರವಾರ, ಮಾರ್ಚ್ 5, 2021
30 °C

ಗುಜರಾತ್‌ನ ಮಗು ಅಪಹರಿಸಿದ ಮಹಿಳೆ ಹುಬ್ಬಳ್ಳಿಯಲ್ಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಜರಾತ್‌ನ ಮಗು ಅಪಹರಿಸಿದ ಮಹಿಳೆ ಹುಬ್ಬಳ್ಳಿಯಲ್ಲಿ?

ಹುಬ್ಬಳ್ಳಿ: ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಮನೆ ಕೆಲಸ ಮಾಡುತ್ತಿದ್ದ ಕರ್ನಾಟಕ ಮೂಲದ ರೇಖಾ ಅಲಿಯಾಸ್‌ ಶಹನಾಜ್ ಎಂಬ ಮಹಿಳೆ ಮನೆ ಮಾಲೀಕರ 5 ವರ್ಷದ ಮಗಳನ್ನು ಅಪಹರಿಸಿಕೊಂಡು ಬಂದಿರುವ ಶಂಕೆ ಇದ್ದು, ಹುಬ್ಬಳ್ಳಿ ಹಾಗೂ ಗದಗ ಜಿಲ್ಲೆಗಳಲ್ಲಿ ಓಡಾಡುತ್ತಿರುವುದು ಮೊಬೈಲ್‌ ಕರೆ ವಿವರ ಪರಿಶೀಲಿಸಿದಾಗ ಗೊತ್ತಾಗಿದೆ.

ಅಕ್ಟೋಬರ್‌ 14ರಂದು ಮಗಳು ಕಿಂಜಲ್‌ಳನ್ನು ರೇಖಾ ಅಪಹರಿಸಿಕೊಂಡು ಹೋಗಿದ್ದಾಳೆ ಎಂದು ಮನೆ ಒಡತಿ ಮನಿಷಾ ಗುಜರಾತ್‌ನ ಮಣಿನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

'ರೇಖಾಳ ಮೊಬೈಲ್ ಕರೆ ವಿವರಗಳನ್ನು ಪರಿಶೀಲಿಸಿದಾಗ ನವೆಂಬರ್‌ 25ರಿಂದ 30ರವರೆಗೆ ಆಕೆ ಹುಬ್ಬಳ್ಳಿಯ ಅರವಿಂದ ನಗರ, ನವಲಗುಂದ, ನರಗುಂದ ಹಾಗೂ ಗದಗ ನಗರಗಳ ವಿವಿಧ ಟವರ್‌ಗಳ ವ್ಯಾಪ್ತಿಯಲ್ಲಿ ಓಡಾಡಿರುವುದು ಗೊತ್ತಾಗಿದೆ’ ಎಂದು ಮಣಿನಗರ ಇನ್‌ಸ್ಪೆಕ್ಟರ್‌ ಚೇತನ್ ಜಡೇಜಾ ‘ಪ್ರಜಾವಾಣಿ’ಗೆ ತಿಳಿಸಿದರು.

'ರೇಖಾ ಹಾಗೂ ಕಿಂಜಲ್‌ಳನ್ನು ಪತ್ತೆ ಹಚ್ಚಿದವರಿಗೆ ₹ 10 ಸಾವಿರ ಬಹುಮಾನ ನೀಡಲಾಗುವುದು. 98793 24147 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡಬಹುದು' ಎಂದು ಅವರು ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.