ಭಾನುವಾರ, ಮಾರ್ಚ್ 7, 2021
22 °C
ಲಕ್ಷದ್ವೀಪದ ಬಳಿ ಹೆಚ್ಚಿದ ಒಖಿ ಅಬ್ಬರ: ಭಾರೀ ಗಾಳಿ

ಮಂಗಳೂರಿನ ಎರಡು ಹಡಗು ಮುಳುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರಿನ ಎರಡು ಹಡಗು ಮುಳುಗಡೆ

ಮಂಗಳೂರು: ಒಖಿ ಪ್ರಭಾವ ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದು, ಮಂಗಳೂರಿನ ಹಳೆಯ ಬಂದರಿನಿಂದ ಸರಕು ಹೊತ್ತು ಸಾಗುತ್ತಿದ್ದ ಎರಡು ಹಡಗುಗಳು ಲಕ್ಷ ದ್ವೀಪದ ಕವರತ್ತಿ ಬಳಿ ಮುಳುಗಿವೆ. ಇನ್ನೊಂದು ಹಡಗೂ ಅಪಾಯದ ಭೀತಿಯಲ್ಲಿದೆ.

ಈ ಬಗ್ಗೆ ಲಕ್ಷದ್ವೀಪದ ಆಡಳಿತದಿಂದ ಮಾಹಿತಿ ಕೇಳಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಹಡಗಿನಲ್ಲಿದ್ದ ಒಟ್ಟು 14 ಜನ ಅಪಾಯದಲ್ಲಿ ಸಿಲುಕಿಕೊಂಡಿದ್ದು, ಈಗಾಗಲೇ ಕರಾವಳಿ ಕಾವಲು ಪಡೆಯಿಂದ ಲಕ್ಷದ್ವೀಪದ ಆಡಳಿತಕ್ಕೆ ಮಾಹಿತಿ ರವಾನಿಸಲಾಗಿದೆ ಎಂದು ಹೇಳಿದ್ದಾರೆ.

ತರಕಾರಿ, ಹಣ್ಣು, ದಿನಸಿ ಸಾಮಗ್ರಿಗಳನ್ನು ಈ ಹಡಗುಗಳಲ್ಲಿ ಸಾಗಿಸಲಾಗುತ್ತಿತ್ತು. ಶುಕ್ರವಾರ ಬೆಳಿಗ್ಗೆ ಈ ಹಡಗುಗಳು ಲಕ್ಷದ್ವೀಪದತ್ತ ಪ್ರಯಾಣ ಬೆಳೆಸಿದ್ದವು ಎಂದು ತಿಳಿದು ಬಂದಿದೆ. ಇದೀಗ ನೌಕಾಪಡೆಯ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಹಡಗಿನಲ್ಲಿದ್ದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.