ಶನಿವಾರ, ಫೆಬ್ರವರಿ 27, 2021
23 °C

ಈದ್ ಮಿಲಾದ್ ಮೆರವಣಿಗೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈದ್ ಮಿಲಾದ್ ಮೆರವಣಿಗೆ ಸಂಭ್ರಮ

ಬೆಂಗಳೂರು: ಈದ್‌ ಮಿಲಾದ್ ಹಬ್ಬದ ಸಂಭ್ರಮ ಮನೆಮಾಡಿದ್ದು, ರಾಜ್ಯದೆಲ್ಲೆಡೆ ಶನಿವಾರ ಈದ್‌ ಅಂಗವಾಗಿ ಮೆರವಣಿಗೆ ನಡೆಯುತ್ತಿವೆ. ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಸಾವಿರಾರು ಜನ; ಪೊಲೀಸ್ ಸರ್ಪಗಾವಲು

ಚಿಕ್ಕಮಗಳೂರು:
ನಗರದಲ್ಲಿ ಈ‌ದ್‌ ಮಿಲಾದ್‌ ಅಂಗವಾಗಿ ಮೆರವಣಿಗೆ ನಡೆಯುತ್ತಿದ್ದು, ಆಜಾದ್ ಪಾರ್ಕ್ ವೃತ್ತದ ಮೂಲಕ ಮೆರವಣಿಗೆ ಸಾಗಿತು.

ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದಾರೆ. ಮೆರವಣಿಗೆ ಅಂಗವಾಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಮೆರವಣಿಗೆ

ಹೊಸಪೇಟೆ:
ಈದ್ ಮಿಲಾದ್ ಅಂಗವಾಗಿ ಶನಿವಾರ ಮೆರವಣಿಗೆ ನಡೆಸಲಾಯಿತು. ಸಹಸ್ರಾರು ಮುಸ್ಲಿಮರು ಪಾಲ್ಗೊಂಡಿದ್ದಾರೆ.

ನಗರದ ವಾಲ್ಮೀಕಿ ವೃತ್ತದಿಂದ ಮೆರವಣಿಗೆ ಮುಂದೆ ಸಾಗಿತು. ಪೊಲೀಸ್‌ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.