ಮಂಗಳೂರು: ಒಖಿ ಚಂಡಮಾರುತದ ಪ್ರಭಾವದಿಂದ ಸಮುದ್ರದ ಅಬ್ಬರ ಹೆಚ್ಚಾಗಿದ್ದು ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿರುವುದರಿಂದ ಇಲ್ಲಿನ ತಲಪಾಡಿ, ಉಳ್ಳಾಲ ಮತ್ತು ಸೋಮೇಶ್ವರ ಕಡಲ ತೀರದ 33 ಕುಟುಂಬಗಳನ್ನು ಶನಿವಾರ ರಾತ್ರಿ ಸ್ಥಳಾಂತರ ಮಾಡಲಾಗಿದೆ.

ಮೂರೂ ಕಡೆಗಳಲ್ಲಿ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಸಮುದ್ರ ತೀರದ ನಿವಾಸಿಗಳನ್ನು ಸ್ಥಳಾಂತರ ಮಾಡಿದೆ.

'ತಲಪಾಡಿಯಲ್ಲಿ ಸಮುದ್ರ ತೀರದಲ್ಲಿ ವಾಸಿಸುವ 33 ಕುಟುಂಬಗಳ 80 ಜನರನ್ನು ಸ್ಥಳಾಂತರ ಮಾಡಿದ್ದೇವೆ. ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಅವರಿಗೆ ತಾತ್ಕಾಲಿಕ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಉಳ್ಳಾಲದಲ್ಲಿ ಎಂಟು ಕುಟುಂಬಗಳ 22 ಮಂದಿ ಮತ್ತು ಸೋಮೇಶ್ವರ ಕಡಲ ತೀರದಲ್ಲಿ ಮೂರು ಕುಟುಂಬಗಳ ಎಂಟು ಮಂದಿ ಸೇರಿದಂತೆ ಒಟ್ಟು 43 ಕುಟುಂಬಗಳ 110 ಜನರನ್ನು ಸ್ಥಳಾಂತರಿಸಲಾಗಿದೆ' ಎಂದು ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು.

ಎರಡು ಮನೆಗಳು ನೀರುಪಾಲು
ಉಳ್ಳಾಲದಲ್ಲಿ ಅಲೆಗಳ ಅಬ್ಬರಕ್ಕೆ ಎರಡು ಮನೆಗಳು ಕೊಚ್ಚಿಕೊಂಡು ನೀರು ಪಾಲಾಗಿವೆ.

ಫಿಲೋಮಿನಾ ಫರ್ನಾಂಡೀಸ್ ಮತ್ತು ಎವರೆಸ್ಟ್ ಆಲ್ಫೋನ್ಸ್ ಎಂಬುವವರ ಮನೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿವೆ. ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ನಗದು, ಚಿನ್ನಾಭರಣ ಸೇರಿದಂತೆ ಎಲ್ಲವೂ ಸಮುದ್ರ ಸೇರಿವೆ.

ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಆಗ ಎರಡೂ ಕುಟುಂಬದವರು ಚರ್ಚ್ ಗೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.