7

ಹೊಸೂರಿನಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

Published:
Updated:
ಹೊಸೂರಿನಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಬೈಲಹೊಂಗಲ: ‘ಇಲ್ಲಿಗೆ ಸಮೀಪದ ಹೊಸೂರ ಗ್ರಾಮದಲ್ಲಿ ಮುಸ್ಲಿಂ ಸಮಾಜದವರು ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಜನ್ಮದಿನವನ್ನು ಶನಿವಾರ ಭಕ್ತಿ, ಸಡಗರ, ಸಂಭ್ರಮದಿಂದ ಆಚರಿಸಿದರು.

ಮುಸ್ಲಿಮರು ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದ ಜಾಮೀಯಾ ಮಸೀದಿಯಿಂದ ದರ್ಗಾವರೆಗೆ ಮೆರವಣಿಗೆ ನಡೆಸಿದರು.

ಮೌಲಾನಾ ಮಹಮ್ಮದಲಿ ಮಲ್ಲಿಕ್, ಮೌಲಾನಾ ಆದಮಅಲಿ ಮಳಗಲಿ ಮಾತನಾಡಿ, ‘ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬರಿಗೂ ಕರುಣೆ ತೋರುವ ಮೂಲಕ ಸಂಕಷ್ಟದಲ್ಲಿ ಇರುವವರಿಗೆ ಕೈಲಾದ ನೆರವಿನ ಹಸ್ತ ಚಾಚುವನೇ ನಿಜವಾದ ಮುಸಲ್ಮಾನ’ ಎಂದು ಮನವರಿಕೆ ಮಾಡಿದರು.

ಹಿರಿಯರಾದ ಕಾಶೀಮಅಲಿ ಮಳಗಲಿ, ಗ್ರಾಮ ಪಂಚಾಯ್ತಿ ಸದಸ್ಯ ದಿಲಾವರ ಧೂಪದಾಳ, ಅಮೀನ್‌ಸಾಬ ಜಮಾದಾರ, ಮೊರಾದ್ಲಿ ಜಮಾದಾರ, ಸಯ್ಯದ ಮಾರಿಹಾಳ, ಮುನ್ನೀರ್ ಶೇಖ, ಶಕೀಲ ಶೇಖ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry