7

ಶೀಘ್ರದಲ್ಲಿಯೇ ಅನುದಾನ: ಜೋಶಿ ಭರವಸೆ

Published:
Updated:
ಶೀಘ್ರದಲ್ಲಿಯೇ ಅನುದಾನ: ಜೋಶಿ ಭರವಸೆ

ಹುಬ್ಬಳ್ಳಿ: ‘ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೆಬ್ಬಳ್ಳಿ ಸೇರಿದಂತೆ ಇತರೆ ಪ್ರಮುಖ ರಸ್ತೆ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನ ಒದಗಿಸಿಕೊಡಲಾಗುವುದು’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಸುಳ್ಳ ಗ್ರಾಮದಲ್ಲಿ ಬುಧವಾರ ನಡೆದ ಸುಳ್ಳ-ಕೇಶ್ವಾಪುರ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೋನರಡ್ಡಿ ಮಾತನಾಡಿ, ‘ಉಸುಕಿನ ಲಾರಿ ಓಡಾಡಿ ಸುಳ್ಳ-ಕೇಶ್ವಾಪುರ ರಸ್ತೆ ಸಂಪೂರ್ಣ ಹಾಳಾಗಿತ್ತು. ಇದರಿಂದ ಸಾರ್ವಜನಿಕರಿಗೆ ಸಂಚರಿಸಲು ಕಷ್ಟವಾಗಿತ್ತು. ಆದ್ದರಿಂದ ₹ 7 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದರು.

‘ಮುಂಬರುವ ದಿನಗಳಲ್ಲಿ ಕುಸುಗಲ್ ರಾಷ್ಟ್ರೀಯ ಹೆದ್ದಾರಿಯಿಂದ ಬ್ಯಾಹಟ್ಟಿ ಅಳಗವಾಡಿ ಮಾರ್ಗವಾಗಿ ನರಗುಂದದ ವರೆಗೆ, ನವಲಗುಂದದಿಂದ ನಲವಡಿ ವರೆಗೆ ಹಾಗೂ ಶಿರೂರದಿಂದ ಹೆಬ್ಬಾಳವರೆಗಿನ ರಸ್ತೆ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗುವುದು. ಇವುಗಳಿಗೆ ಕೇಂದ್ರದಿಂದ ಕೂಡಲೇ ಅನುದಾನ ಮಂಜೂರು ಮಾಡಿಸಬೇಕು’ ಎಂದು ಕೋನರಡ್ಡಿ ಮನವಿ ಮಾಡಿದರು.

ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಬಸವರಾಜ ಸಾಲಿ, ಬಸವರಾಜ ಬೀರಣ್ಣವರ, ಗ್ರಾ.ಪಂ. ಅಧ್ಯಕ್ಷ ಕಲ್ಲಪ್ಪ ಮೇಟಿ, ಉಪಾಧ್ಯಕ್ಷರಾದ ಪಾರ್ವತೆವ್ವ ಕಲಗೌಡ್ರ, ಸದಸ್ಯರಾದ ಬಸವರಾಜ ದೇಮಕ್ಕನವರ, ಜಗದೀಶ ಬಡಿಗೇರ, ಗಂಗಮ್ಮ ಬಂಗಿ, ನೀಲವ್ವ ಮ್ಯಾನಾಸುರ, ಗರಪ್ಪ ಗೌರಿ, ಸಣ್ಣಕಲ್ಲಪ್ಪ ಒಂಟಿ, ಮಂಜುನಾಥ ಬಡಿಗೇರ, ಬಸಪ್ಪ ಕುಸುಗಲ್ಲ, ಜೆಡಿಎಸ್ ಮುಖಂಡರಾದ ವೀರನಗೌಡ ಮರಿಗೌಡರ, ರಾಜುಗೌಡ ಮತ್ತಿಹಳ್ಳಿ, ನಾಗಣ್ಣ ಅರಳಿಕಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry